Friday, March 31, 2023

Latest Posts

INTRESTING | ಈ ಇಲಿ ಹೆಸರಲ್ಲೂ ಇದೆ ಗಿನ್ನಿಸ್ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೀಸೆಯಿಂದ ಟ್ರ್ಯಾಕ್ಟರ್ ಎಳೆಯೋದು, ಹಲ್ಲಿನಿಂದ ತೆಂಗಿನ ಕಾಯಿ ಸುಲಿಯೋದು, ಉದ್ದದ ಉಗುರು ಬಿಡೋದು ಹೀಗೆ ಇನ್ನಷ್ಟು ವಿಭಿನ್ನವಾದ ಗಿನ್ನಿಸ್ ದಾಖಲೆಗಳಿವೆ.

ಆದರೆ ಇಲ್ಲೊಂದು ಇಲಿ ಏನೂ ಮಾಡದೇ ಗಿನ್ನಿಸ್ ದಾಖಲೆಗೆ ಸೇರಿದೆ, ಅದು ಹೇಗೆ ಅಂತೀರಾ? ಈ ಇಲಿ ಬರೋಬ್ಬರಿ 9 ವರ್ಷ 209 ದಿನದಿಂದ ಬದುಕಿದೆ, ಮಾನವ ಆರೈಕೆಯಲ್ಲಿ ಜಗತ್ತಿನ ಅತ್ಯಂತ ಹಳೆಯ ಇಲಿ ಎನ್ನುವ ಹೆಗ್ಗಳಿಕೆ ಇದರದ್ದು.

ಪ್ಯಾಟ್ ಹೆಸರಿನ ಫೆಸಿಫಿಕ್ ಪಾಕೆಟ್ ಮೌಸ್ ವಿಶ್ವದ ಅತಿ ಹಿರಿಯ ಇಲಿ ಎನಿಸಿಕೊಂಡಿದೆ. 2013 ರಲ್ಲಿ ಚಿಕ್ಕ ಇಲಿ ಜಾತಿಯ ಈ ಇಲಿ ಸ್ಯಾನ್‌ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್‌ನಲ್ಲಿ ಜನಿಸಿದೆ. ಕರಾವಳಿ ಮರಳು ಪ್ರದೇಶದಲ್ಲಿ ವಾಸಿಸುವ ಈ ಇಲಿ ಬೀಜಗಳು ಹಾಗೂ ಕೀಟಗಳನ್ನು ತಿಂದು ಬದುಕುತ್ತದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!