Friday, December 9, 2022

Latest Posts

ಎಂಟು ವರ್ಷಗಳ ಕಾರ್ಯಾಚರಣೆ ನಂತರ ಅಂತ್ಯ ಕಂಡಿದೆ ಮಂಗಳಯಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಚೊಚ್ಚಲ ಉಪಗ್ರಹ ಮಿಷನ್ ಎಂಟು ವರ್ಷಗಳ ಮಂಗಳಯಾನ ಕಾರ್ಯಾಚರಣೆ ಕೊನೆಗೊಂಡಿದೆ.
ಮಾರ್ಸ್ ಆರ್ಬಿಟರಿ ಮಿಷನ್ ಮಂಗಳ ಗ್ರಹದ ಪರಿಭ್ರಮಣೆ ಆರಂಭಿಸಿದ ಎಂಟು ವರ್ಷದ ನಂತರ ಇದೀಗ ಅದರ ಬ್ಯಾಟರಿ ದೃಢತೆ ಹಾಗೂ ಇಂಧನ ಖಾಲಿಯಾಗಿದ್ದು, ಕಾರ್ಯಾಚರಣೆ ನಿಲ್ಲಿಸಿದೆ ಎಂದು ಇಸ್ರೋ ಹೇಳಿದೆ.

2013ರಲ್ಲಿ ಮಂಗಳ ಗ್ರಹದ ಅಂಗಳದ ಅಧ್ಯಯನಕ್ಕಾಗಿ ಮಾರ್ಸ್ ಆರ್ಬಿಟರ್ ಉಪಗ್ರಹವನ್ನು ಉಡಾವಣೆ ಮಾಡಲಾಗಿತ್ತು. ಅದನ್ನು ಮತ್ತೆ ಸ್ಥಾಪಿಸಲಾಗುವುದು ಎಂದು ಇಸ್ರೋ ಮಾಹಿತಿ ನೀಡಿದೆ.

2013 ನವೆಂಬರ್ 5ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. 450ಕೋಟಿ ರೂಪಾಯಿ ವೆಚ್ಚದಲ್ಲಿ ಜೀವ ತಳೆದ ಯೋಜನೆ ಇದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!