ಅಂಚಿತನಿಂದ ದಾಖಲೆ
ಹೊಸದಿಗಂತ ಡಿಜಿಟಲ್ ಡೆಸ್ಕ್, ಗೋಕಾಕ:
ನಗರದ ಕೆಎಲ್ಇ ಶಾಲೆಯ ಯುಕೆಜಿ ವಿದ್ಯಾರ್ಥಿ ಅಂಚಿತ ಕೊಣ್ಣೂರ ಹುಲಾಹೂಪ್ ಸ್ಪಿನ್ಸ್ ಆಟದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾನೆ. ಕೇವಲ 8 ನಿಮಿಷ 1 ಸೆಕೆಂಡ್ ಗಳಲ್ಲಿ 1127 ಬಾರಿ ಸ್ಪಿನ್ ಮಾಡಿ ವರ್ಲ್ಡ್ ಬುಕ್ ಆಫ್ ರೆರ್ಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ.
ಈ ಪೋರನಿಗೆ ತಂದೆ ಆನಂದ, ತಾಯಿ ಸ್ನೇಹಾ ಅವರು ತರಬೇತಿ ನೀಡಿದ್ದರು.
ಈ ವಿದ್ಯಾರ್ಥಿಯ ಸಾಧನೆಯನ್ನು ಶಾಲೆಯ ಆಡಳಿತಾಕಾರಿ ಅನುಪಾ ಕೌಶಿಕ, ಪ್ರಾಚಾರ್ಯೆ ಮನಿಶಾ ಮಾಂಗಳೇಕರ, ಶಿಕ್ಷಕಿ ಅನುರಾಧ ಹುದ್ದಾರ ಹಾಗೂ ಆಡಳಿತ ಮಂಡಳಿಯವರು ಅಭಿನಂದಿಸಿದ್ದಾರೆ.