ʼಮಹಾಮಸ್ತಕಾಭಿಷೇಕʼ ಚಿತ್ರಕ್ಕೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಕೊಪ್ಪಳ:
ಥಾಯ್ಲೆಂಡ್ ದೇಶದಲ್ಲಿ ನಡೆದ ಕ್ರಿಸಾಲಿಸ್ ಫೋಟೋ ಸರ್ಕ್ಯೂಟ್-2022 ಅಂತಾರಾಷ್ಟ್ರೀಯ ಛಾಯಾಗ್ರಹಣ ಸ್ಪರ್ಧೆಯಲ್ಲಿ ನಗರದ ಛಾಯಾಗ್ರಾಹಕ ಪ್ರಕಾಶ ಕಂದಕೂರ ಅವರ ‘ಸ್ಪ್ರಿಂಕಲ್ಸ್ ಆಫ್ ಅನಾಯ್ಟಿಂಗ್’ (ಅಭಿಷೇಕದ ಸಿಂಚನ) ಶೀರ್ಷಿಕೆಯ ಚಿತ್ರ ‘ಫೋಟೋ ವಿವೋ’ ಚಿನ್ನದ ಪದಕ ಪಡೆದುಕೊಂಡಿದೆ.
ಸ್ಪರ್ಧೆಯ ‘ಹ್ಯೂಮನ್ ಆಕ್ಟಿವಿಟಿ’ ವಿಭಾಗದಲ್ಲಿ ಪ್ರಶಸ್ತಿ ಗಳಿಸಿರುವ ಈ ಚಿತ್ರವನ್ನು 12 ವರ್ಷಗಳಿಗೊಮ್ಮೆ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸೆರೆಹಿಡಿಯಲಾಗಿತ್ತು. ಆ ಬೃಹತ್ ಏಕಶಿಲಾ ಬಾಹುಬಲಿ ಮೂರ್ತಿಯ ಅಭಿಷೇಕದ ಸಿಂಚನದ ಸ್ಪರ್ಷದಿಂದ ಪುಳಕಿತರಾಗುತ್ತಿರುವ ಭಕ್ತ ಸಮೂಹವನ್ನು ಚಿತ್ರದಲ್ಲಿ ಕಾಣಬಹುದಾಗಿದೆ.
ಅಲ್ಲದೆ ಕಂದಕೂರ ಅವರ ‘ದಿ ಫೀಯರ್’ ಹಾಗೂ ‘ಓಲ್ಡೇಜ್ ಆರ್ಫನ್’ ಚಿತ್ರಗಳೂ ಸಹ ಇದೇ ಸ್ಪರ್ಧೆಯಲ್ಲಿ ಫೋಟೋವಿವೋ ಚಿನ್ನದ ಪದಕಗಳನ್ನು ಪಡೆದುಕೊಂಡಿವೆ. ರಾಜಧಾನಿ ಬ್ಯಾಂಕಾಕ್ನ ಆರ್ಟ್ ಆಂಡ್ ಕಲ್ಚರ್ ಸೆಂಟರ್ನಲ್ಲಿ ಅ.20 ರಂದು ಬಹುಮಾನ ವಿತರಣಾ ಸಮಾರಂಭ ಹಾಗೂ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದು ಸಂಘಟಕ ಸ್ಟೀವನ್ ಯೀ ಪುಯ್ ಚುಂಗ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!