ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಅಭಿಮಾನ ತೋರಿಸೋಕೆ ಅಭಿಮಾನಿಗಳು ಸಾಕಷ್ಟು ದಾರಿ ಆರಿಸುತ್ತಾರೆ.
ಇಲ್ಲೊಬ್ಬ ರಾಹುಲ್ ಗಾಂಧಿ ಅಭಿಮಾನಿ, ಅವರ ಫೋಟೊವನ್ನು ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ರಮೇಶ್ ನಾಯ್ಕ್ ಎಂಬ ಯುವಕ ತನ್ನ ಎದೆ ಮೇಲೆ ರಾಹುಲ್ ಗಾಂಧಿ ಟ್ಯಾಟೂ ಹಾಕಿಸಿಕೊಂಡು ಮೈಸೂರಿನಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾನೆ.
ರಾಹುಲ್ ಗಾಂಧಿಗೆ ತನ್ನ ಶರ್ಟ್ ಬಿಚ್ಚಿ ಟ್ಯಾಟೂ ತೋರಿಸಿ, ಅವರ ಜೊತೆ ಹೆಜ್ಜೆ ಹಾಕಿದ್ದಾನೆ. ಟ್ಯಾಟೂ ನೋಡಿದ ರಾಗಾ ಫುಲ್ ಖುಷಿಯಾಗಿದ್ದು, ಅಭಿಮಾನಕ್ಕೆ ಮನಸೋತಿದ್ದಾರೆ.