May 10, 2026
Sunday, May 10, 2026
spot_img

Gold Rate | ಬಂಗಾರ ಅಂದ್ರೆ ಸುಮ್ಮನೇನಾ? ಹತ್ತೇ ದಿನದಲ್ಲಿ ಬೆಲೆ ಏರಿಕೆಗೆ ‘ರಾಕೆಟ್’ ವೇಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಎರಡು ವಾರಗಳಿಂದ ಏರಿಳಿತದ ‘ಕಣ್ಣಾಮುಚ್ಚಾಲೆ’ ಆಡುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇದೀಗ ಗ್ರಾಹಕರಿಗೆ ಬಿಸಿ ಮುಟ್ಟಿಸಿವೆ. ಈ ವಾರಾಂತ್ಯದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ತಳಮಳ ಸೃಷ್ಟಿಸಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ಗೆ ಸುಮಾರು 600 ರೂಪಾಯಿಗೂ ಅಧಿಕ ಮೊತ್ತದಷ್ಟು ಹೆಚ್ಚಳ ಕಂಡಿದೆ. ಈ ವಾರಾಂತ್ಯದಲ್ಲೇ ಪ್ರತಿ ಗ್ರಾಮ್‌ ಚಿನ್ನಕ್ಕೆ 145 ರೂಪಾಯಿ ಏರಿಕೆಯಾಗಿದೆ.

22 ಕ್ಯಾರಟ್ ಚಿನ್ನ (10 ಗ್ರಾಮ್): ₹1,42,800

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,55,780

100 ಗ್ರಾಮ್ ಬೆಳ್ಳಿ: ₹27,500

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ಬೆಲೆ ಕೂಡ ಏರುಗತಿಯಲ್ಲಿದೆ. ಕಳೆದ 10 ದಿನಗಳಲ್ಲಿ ಬೆಳ್ಳಿ ಬೆಲೆ 25 ರೂಪಾಯಿಗಳಷ್ಟು ದುಬಾರಿಯಾಗಿದೆ.

ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಮ್‌ಗೆ 1,42,800 ರೂಪಾಯಿ ಇದ್ದರೆ, ಬೆಳ್ಳಿಯ ದರ 100 ಗ್ರಾಮ್‌ಗೆ 27,500 ರೂಪಾಯಿ ತಲುಪಿದೆ. ಇನ್ನು ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ ಗರಿಷ್ಠ 28,000 ರೂಪಾಯಿ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !