October 9, 2026
Friday, October 9, 2026
spot_img

Gold Rate | ಚಿನ್ನ ಖರೀದಿಸೋರಿಗೆ ಸ್ವಲ್ಪ ನೆಮ್ಮದಿ: ಬಂಗಾರದ ಬೆಲೆಯಲ್ಲಿ ಇಳಿಕೆ ಮುಂದುವರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನದ ಬೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆ ಕಾಣಿಸುತ್ತಿದ್ದು, ಇಂದು ಕೂಡ ದರ ಸ್ವಲ್ಪ ಮಟ್ಟಿಗೆ ಕುಸಿದಿದೆ. ಪ್ರತಿ ಗ್ರಾಮ್‌ಗೆ ಸುಮಾರು 55 ರೂಪಾಯಿ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಗಮನಸೆಳೆಯುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,40,200 ರೂಪಾಯಿಗೆ ಇಳಿದಿದ್ದು, 24 ಕ್ಯಾರಟ್ ಚಿನ್ನದ ದರ 1,52,950 ರೂಪಾಯಿಯಾಗಿದೆ.

22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್‌ಗೆ 14,020 ರೂಪಾಯಿಯಷ್ಟಿದೆ. ಬೆಳ್ಳಿ ದರದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದೆ, 1 ಗ್ರಾಂಗೆ 260 ರೂಪಾಯಿಯಷ್ಟೇ ಇದೆ.

ಇದನ್ನೂ ಓದಿ:

ಕೆಲವೆಡೆ, ವಿಶೇಷವಾಗಿ ಚೆನ್ನೈ ಮತ್ತು ಕೇರಳ ಪ್ರದೇಶಗಳಲ್ಲಿ ಬೆಳ್ಳಿ ದರ ಸ್ವಲ್ಪ ಹೆಚ್ಚಾಗಿದೆ. ವಿದೇಶಿ ಮಾರುಕಟ್ಟೆಯಲ್ಲೂ ಚಿನ್ನದ ದರದಲ್ಲಿ ಸಣ್ಣ ಮಟ್ಟದ ಏರಿಳಿತ ಮುಂದುವರಿದಿದೆ. ಒಟ್ಟಿನಲ್ಲಿ, ಚಿನ್ನದ ದರದಲ್ಲಿ ಇಳಿಕೆ ಕಂಡುಬರುತ್ತಿರುವುದು ಖರೀದಿಗೆ ಆಸಕ್ತಿ ಹೊಂದಿರುವವರಿಗೆ ಅವಕಾಶವಾಗಬಹುದು.

Must Read