ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಪದಾರ್ಥಗಳು:
ಗೊಂಗುರ – 4 ಕಟ್ಟು
ಈರುಳ್ಳಿ-2
ಹಸಿಮೆಣಸಿನಕಾಯಿ -5
ಅರಿಶಿನ – ಚಿಟಿಕೆ
ಖಾರದ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಸಾಕಷ್ಟು
ಕರಿಬೇವು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಮಸಾಲಾ ಪುಡಿ – 1 ಟೀಸ್ಪೂನ್
ಮಾಡುವ ವಿಧಾನ:
ಮೊದಲು ಗೊಂಗುರ ಸೊಪ್ಪನ್ನು ಕತ್ತರಿಸಿ ಮಣ್ಣಿಲ್ಲದಂತೆ ನೀರಿನಲ್ಲಿ ತೊಳೆಯಿರಿ. ನಂತರ ಬೇಯಿಸಿ ಪಕ್ಕಕ್ಕೆ ಇರಿಸಿ.
ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಕತ್ತರಿಸಿ.ಸ್ಟವ್ ಆನ್ ಮಾಡಿ ದಪ್ಪ ಬಟ್ಟಲಿನಲ್ಲಿ ಹಾಕಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ಈಗ ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕರಿಬೇವಿನ ಎಲೆಗಳನ್ನು ಸೇರಿಸಿ ಸ್ವಲ್ಪ ಫ್ರೈ ಮಾಡಿ. ಅರಿಶಿನ, ಉಪ್ಪು, ಮೆಣಸು ಮತ್ತು ಮಸಾಲಾ ಪುಡಿ ಸೇರಿಸಿ ಮತ್ತು ಐದು ನಿಮಿಷಗಳ ಕಾಲ ಫ್ರೈ ಮಾಡಿ. ಈಗ ಅದಕ್ಕೆ ಬೇಯಿಸಿದ ಗೊಂಗುರ ಹಾಕಿ ಚೆನ್ನಾಗಿ ಕಲಸಿ ಮುಚ್ಚಿಡಿ. ಗೊಂಗುರ ಹುಳಿಯಾಗಿರುವುದರಿಂದ ಒಂದು ಹನಿ ನೀರು ಕೂಡ ಹಾಕುವ ಅಗತ್ಯವಿಲ್ಲ.
ಕಾಲು ಗಂಟೆ ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ಮಸಾಲೆ ಗೊಂಗುರ ಸಿದ್ಧ. ಈ ರೆಸಿಪಿ ಅನ್ನ, ಬಿರಿಯಾನಿ ರೈಸ್ನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.