ದೆಹಲಿಯಲ್ಲಿ ಹೊಸ ನಿಯಮ: ʻರೆಡ್ ಸಿಗ್ನಲ್ ಬಿದ್ದ ಕೂಡಲೇ ಎಂಜಿನ್ ಆಫ್ ಮಾಡಿʼ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿರುವುದು ಗೊತ್ತೇ ಇದೆ. ವಾಯು ಮಾಲಿನ್ಯ ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿಂದೆ ವಾಹನಗಳಿಗೆ ಸಮ-ಬೆಸ ಪದ್ಧತಿಯನ್ನು ಅಳವಡಿಸಲಾಗಿತ್ತು.

ಇದರ ಪ್ರಕಾರ ಸಮಸಂಖ್ಯೆಯ ವಾಹನ ನೋಂದಣಿ ಸಂಖ್ಯೆಗಳನ್ನು ಒಂದು ದಿನ ಮತ್ತು ಬೆಸ ಸಂಖ್ಯೆಯ ವಾಹನಗಳನ್ನು ಇನ್ನೊಂದು ದಿನ ಓಡಿಸಬೇಕು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸುಡುವುದನ್ನು ಸಹ ಸಂಪೂರ್ಣವಾಗಿ ನಿಷೇಧಿಸಿದೆ. ಇದೀಗ ದೆಹಲಿಯಲ್ಲಿ ವಾಯು ಮಾಲಿನ್ಯ ತಗ್ಗಿಸಲು 15 ಅಂಶಗಳ ಯೋಜನೆ ರೂಪಿಸಲಾಗಿದೆ. ಇದರ ಭಾಗವಾಗಿ ‘ರೆಡ್ ಲೈಟ್ ಆನ್.. ಗಾಡಿ ಆಫ್’ ಎಂಬ ಹೊಸ ಅಭಿಯಾನ ಆರಂಭಿಸಲಾಗಿದೆ. ಅದು ಟ್ರಾಫಿಕ್ ಸಿಗ್ನಲ್ ಬಳಿ ಎಲ್ಲಿಯಾದರೂ ಕೆಂಪು ದೀಪ ಬಿದ್ದರೆ, ತಕ್ಷಣವೇ ಗಾಡಿಯ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡಬೇಕು. ಕಾರು, ಬೈಕ್, ಆಟೊ, ಯಾವುದೇ ವಾಹನ ಕೆಂಪು ದೀಪ ಬೆಳಗಿದಾಗ ಎಂಜಿನ್ ಆಫ್ ಮಾಡಬೇಕು.

ದೆಹಲಿಯ ಪ್ರತಿ ಸಿಗ್ನಲ್ ಬಳಿ ವಾಹನಗಳ ಇಂಜಿನ್‌ಗಳನ್ನು ನಿಲ್ಲಿಸುವ ಮೂಲಕ ವಾಯುಮಾಲಿನ್ಯವು ಶೇಕಡಾ 15-20 ರಷ್ಟು ಕಡಿಮೆಯಾಗುತ್ತದೆ ಎಂದು ಸರ್ಕಾರ ಆಶಿಸುತ್ತಿದೆ. ಹೊಸದಾಗಿ ಜಾರಿಗೆ ತಂದಿರುವ ಈ ನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೇಜ್ರಿವಾಲ್ ಸರ್ಕಾರ ಪ್ರಯತ್ನಿಸುತ್ತಿದೆ. ಕೆಲವು ಸ್ವಯಂಸೇವಕರು ಸಹ ಸ್ವಯಂಪ್ರೇರಿತ ಕೆಲಸ ಮಾಡುತ್ತಾರೆ. ಕೆಲವು ಸಿಗ್ನಲ್‌ಗಳ ಬಳಿ ಸ್ವಯಂಸೇವಕರು ವಾಹನ ಸವಾರರಿಗೆ ಗುಲಾಬಿ ನೀಡಿ ವಾಹನಗಳನ್ನು ನಿಲ್ಲಿಸುವಂತೆ ಪ್ರಚಾರ ಮಾಡುತ್ತಿದ್ದಾರೆ. ಸುಮಾರು 2,500 ಸ್ವಯಂಸೇವಕರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!