ಮಲೈಕಾ ಅರೋರಾ ಜೊತೆಗಿನ ಸಂಬಂಧಕ್ಕೆ ಗುಡ್ ಬೈ ಹೇಳಿದ್ರಾ ನಟ ಅರ್ಜುನ್​ ಕಪೂರ್​ ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನ ಹಾಟ್ ಜೋಡಿ ಎಂದೇ ಬಿಟೌನ್ ನಲ್ಲಿ ಫೇಮಸ್ ಆಗಿದ್ದ ನಟ ಅರ್ಜುನ್​ ಕಪೂರ್​ -ಮಲೈಕಾ ಅರೋರಾ ನಡುವೆ ಈಗ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಈ ಜೋಡಿ ನಾಲ್ಕು ವರ್ಷಗಳಳಿಂದ ಡೇಟಿಂಗ್​ ಮಾಡುತ್ತಿದ್ದು, ಇದೀಗ ಬ್ರೇಕಪ್ ಮಾಡಿಕೊಂಡು ಬಾಳ ಪಯಣದಲ್ಲಿ ದೂರವಾಗಿದ್ದಾರೆ ಎಂಬ ಸುದ್ದಿ ಬಿ ಟೌನ್​ನಲ್ಲಿ ಜೋರಾಗಿ ಹಬ್ಬಿದೆ.
ಮಲೈಕಾ ಅರೋರಾ, ಅರ್ಜುನ್​ ಕಪೂರ್​ ಜೊತೆಯಲ್ಲಿ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದ್ದಂತೆ 2019ರಲ್ಲಿ ಈ ಜೋಡಿಯು ತಮ್ಮ ಸಂಬಂಧವನ್ನು ಬಹಿರಂಗವಾಗಿ ಹೇಳಿಕೊಂಡಿತ್ತು.
ಈ ಜೋಡಿ ಸೋಶಿಯಲ್​ ಮೀಡಿಯಾದಲ್ಲೂ ತಮ್ಮ ಟೂರ್ , ಹಲವು ಕ್ಷಣಗಳ ಫೋಟೋವನ್ನು ತಮ್ಮ ಖಾತೆಗಳಲ್ಲಿ ಅನೇಕ ಬಾರಿ ಹಂಚಿಕೊಂಡಿದ್ದರು.
ಬಿಟೌನ್ ನಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ , ಬ್ರೇಕಪ್ ಬಳಿಕ ಮಲೈಕಾ ಅರೋರಾ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಅವರು ಮನೆಯಿಂದ ಹೊರಗಡೆ ಕಾಲೇ ಇಡುತ್ತಿಲ್ಲವಂತೆ. ಕಳೆದ ಆರು ದಿನಗಳಿಂದ ಮಲೈಕಾ ಅರೋರಾ ಮನೆಯಲ್ಲಿ ಒಬ್ಬರೇ ಇದ್ದಾರೆ ಎನ್ನಲಾಗಿದೆ. ಬೇಸರದಿಂದ ಮಲೈಕಾ ಹೊರ ಪ್ರಪಂಚದಿಂದ ದೂರವೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ಅರ್ಜುನ್​ ಕಪೂರ್​ ತಮ್ಮ ಸಹೋದರಿ ರಿಯಾ ಕಪೂರ್​ ಮನೆಗೆ ಔತಣಕೂಟಕ್ಕೆ ಆಗಮಿಸಿದ್ದರು.ಈ ವೇಳೆಯೂ ರಿಯಾ ಕಪೂರ್​ ನಿವಾಸ ಪಕ್ಕಾ ಮಲೈಕಾನಿವಾಸವಿದ್ದರೂ ಅರ್ಜುನ್​ ಕಪೂರ್ ಭೇಟಿ ನೀಡಿಲ್ಲ ಎನ್ನಲಾಗುತ್ತಿದೆ. ಅದೇ ರೀತಿ ಹೆಚ್ಚಾಗಿಔತಣಕೂಟಕ್ಕೆ ಮಲೈಕಾ ಹಾಗೂ ಅರ್ಜುನ್​ ಒಟ್ಟಾಗಿಯೇ ಹೋಗುತ್ತಿದ್ದರು. ಆದರೆ ಈ ಬಾರಿ ಅರ್ಜುನ್​ ಕಪೂರ್ ಒಬ್ಬರೇ ಬಂದಿದ್ದರು ಎನ್ನಲಾಗಿದೆ.
ನಟಿ ಮಲೈಕಾ ಅರೋರಾ, ನಟ ಅರ್ಬಾಜ್​ ಖಾನ್​ ಜೊತೆ 1998ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿ 2016ರಲ್ಲಿ ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡಿದೆ. ಈ ದಂಪತಿಗೆ ಅರ್ಹಾನ್​ ಎಂಬ ಪುತ್ರನಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here