ಕರಾವಳಿ ಜನತೆಗೆ ಗುಡ್ ನ್ಯೂಸ್: ತುಳುವಿನಲ್ಲಿ `ಕಾಂತಾರ’ ರಿಲೀಸ್ ಗೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲಿ ಅಪಾರ ಮೆಚ್ಚುಗೆ ಪಡೆದ `ಕಾಂತಾರ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದು, ಸಿನಿಮಾ ಬಂದು ೫೦ ದಿನವಾದ್ರೂ ಅಬ್ಬರ ಕಡಿಮೆಯಾಗಿಲ್ಲ.

ಕನ್ನಡದಲ್ಲಿ ತೆರೆಕಂಡು ಬಳಿಕ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಡಬ್ ಆಗಿ ತೆರೆಕಂಡಿತ್ತು. ಇದೀಗ ತುಳು ಭಾಷೆಯಲ್ಲೂ ಡಬ್ ಆಗಲಿದೆ. ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.

ಹೊಂಬಾಳೆ ಬ್ಯಾನರ್‌ನ `ಕಾಂತಾರ’ ಸಿನಿಮಾ ತುಳು ಭಾಷೆಯಲ್ಲೂ ಕೂಡ ಡಬ್ ಆಗಲಿದೆ. ಈಗಾಗಲೇ ಡಬ್ಬಿಂಗ್ ಪ್ರಕ್ರಿಯೆ ಕೂಡ ಶುರುವಾಗಿದೆ. ಸೆನ್ಸಾರ್ ಬಳಿಕ ಡಿಸೆಂಬರ್ ಮೊದಲ ವಾರದಲ್ಲಿತುಳುವಿನಲ್ಲಿ ತೆರೆ ಕಾಣಲಿದೆ.

ವರ್ಲ್ಡ್ ವೈಡ್ ಕಲೆಕ್ಷನ್ 367 ಕೋಟಿ ರೂ. ಕಲೆಕ್ಷನ್ ಮಾಡಿ 400 ಕೋಟಿ ರೂ. ಕಲೆಕ್ಷನ್ ಮಾಡುತ್ತ ರಿಷಬ್ ಶೆಟ್ಟಿ ಸಿನಿಮಾ ಮುನ್ನುಗ್ಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!