ಏರ್ ಇಂಡಿಯಾಗೆ 121.5 ಮಿಲಿಯನ್ ಡಾಲರ್ ಮರುಪಾತಿಗೆ ಅಮೆರಿಕ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಟಾ ಗ್ರೂಪ್ಸ್ ಒಡೆತನದ ಏರ್ ಇಂಡಿಯಾಗೆ ಸಂಕಷ್ಟ ಎದುರಾಗಿದ್ದು, ಅಮೆರಿಕವು ಮರುಪಾತಿ (Refund) ಹಾಗೂ ದಂಡವಾಗಿ (Fine) 121.5 ಮಿಲಿಯನ್ ಡಾಲರ್ (ಸುಮಾರು 987 ಕೋಟಿ ರೂ.) ವಿಧಿಸಿದೆ.

ತನ್ನ ಪ್ರಯಾಣಿಕರಿಗೆ 121.5 ಮಿಲಿಯನ್ ಡಾಲರ್ ಮರುಪಾವತಿಯೊಂದಿಗೆ 1.4 ಮಿಲಿಯನ್ ಡಾಲರ್ (11 ಕೋಟಿ ರೂ.) ದಂಡವನ್ನು ಪಾವತಿಸಲು ಆದೇಶಿಸಲಾಗಿದೆ.

ಕೊರೋನಾ ವೇಳೆಯಲ್ಲಿ ಸಾಕಷ್ಟು ಬಾರಿ ವಿಮಾನ ರದ್ದತಿ ಹಾಗೂ ವಿಮಾನ ಬದಲಾವಣೆ ಮಾಡಿರುವ ಹಿನ್ನೆಲೆ ಏರ್ ಇಂಡಿಯಾ ಸೇರಿದಂತೆ ಒಟ್ಟು 6 ವಿಮಾನಯಾನ ಸಂಸ್ಥೆಗಳಿಗೆ ಅಮೆರಿಕ ಒಟ್ಟು 600 ಮಿಲಿಯನ್ ಡಾಲರ್ (ಸುಮಾರು 4 ಸಾವಿರ ಕೋಟಿ ರೂ.) ಮರುಪಾವತಿ ಮಾಡುವಂತೆ ಹೇಳಿದೆ.

ಏರ್ ಇಂಡಿಯಾ ವಿಮಾನ ರದ್ದತಿ ಹಾಗೂ ವಿಳಂಬಗೊಳಿಸಿದ್ದಕ್ಕೆ ತಮ್ಮ ಗ್ರಾಹಕರಿಗೆ ಸಕಾಲದಲ್ಲಿ ಮರುಪಾವತಿಯನ್ನು ಮಾಡಿಲ್ಲ. ಇದರಿಂದಗ್ರಾಹಕರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಹೀಗಾಗಿ ಸಂಸ್ಥೆಗೆ ದಂಡ ವಿಧಿಸಿರುವುದಾಗಿ ಅಮೆರಿಕದ ಸಾರಿಗೆ ಇಲಾಖೆ ತಿಳಿಸಿದೆ.

ಏರ್ ಇಂಡಿಯಾ ಜೊತೆಗೆ ಫ್ರಾಂಟಿಯರ್, ಟಿಎಪಿ ಪೋರ್ಚುಗಲ್, ಏರೋ ಮೆಕ್ಸಿಕೋ, ಇಐ ಎಐ ಮತ್ತು ಏವಿಯಾಂಕಾ ಸೇರಿದಂತೆ ಇತರ ವಿಮಾನಯಾನ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!