ಮೋಹನ್‌ ಲಾಲ್‌ ಅಭಿಮಾನಿಗಳಿಗೆ ಗುಡ್ ನ್ಯೂಸ್: ‘ದೃಶ್ಯಂ-3ʼ ಪೋಸ್ಟರ್‌ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಲಿವುಡ್‌ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್‌ ಅಭಿನಯದ 2013 ರಲ್ಲಿ ಬಂದ ಕ್ರೈಂ ಥ್ರಿಲ್ಲರ್‌ ʼದೃಶ್ಯಂʼ ಸಿನಿಮಾಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಇದಾದ ಬಳಿಕ ಕಳೆದ ವರ್ಷ ʼದೃಶ್ಯಂ-2ʼ ಚಿತ್ರ ಕೂಡ ಬಾಕ್ಸ್‌ ಆಫೀಸ್‌ ನಲ್ಲಿ ಸದ್ದು ಮಾಡಿತ್ತು. ಇದೀಗ ಚಿತ್ರದ ಮೂರನೇ ಭಾಗ ತೆರೆಗೆ ಬರುವ ವಿಷಯ ಮಾಲಿವುಡ್‌ ನಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ತನ್ನ ಪತ್ನಿಯಿಂದ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಕೊಲೆಯಾಗುತ್ತದೆ. ಸಿನಿಮಾದ ಎರಡನೇ ಭಾಗದ ಅಂತ್ಯದಲ್ಲಿ ಚಾರ್ಜ್‌ ಕುಟ್ಟಿ ʼತನ್ನ ಕುಟುಂಬ ರಕ್ಷಣೆಗೆ ನಾನು ಸದಾ ಸಿದ್ದʼ ಎನ್ನುವ ಮಾತು ಮೂರನೇ ಭಾಗಕ್ಕೆಮುನ್ನುಡಿ ಬರೆದಂತಿತ್ತು.

ʼದೃಶ್ಯಂʼ ಚಿತ್ರ ತಮಿಳು, ತೆಲುಗು, ಕನ್ನಡ, ಚೈನೀಸ್‌,ಇಂಡೋನೇಷಿಯಾ ಭಾಷೆಗಳಿಗೂ ರಿಮೇಕ್‌ ಆಗಿ ಯಶಸ್ಸು ಗಳಿಸಿದೆ. ಕನ್ನಡದಲ್ಲಿ ರವಿಚಂದ್ರನ್‌, ತಮಿಳಿನಲ್ಲಿ ಕಮಲ್‌ ಹಾಸನ್‌, ತೆಲುಗಿನಲ್ಲಿ ವೆಂಕಟೇಶ್‌ ಹಾಗೂ ಹಿಂದಿಯಲ್ಲಿ ಅಜಯ್‌ ದೇವಗನ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ʼದೃಶ್ಯಂ-2ʼ ನಲ್ಲಿದ್ದ ಟ್ವಿಸ್ಟ್‌, ಟರ್ನ್‌, ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ತಂದು ಕೂರಿಸಿತ್ತು. ಇದೀಗ ಚಿತ್ರದ ಮೂರನೇ ಭಾಗ ತೆರೆಗೆ ಬರಲಿದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಟ್ವಿಟರ್‌ ನಲ್ಲಿ ಅಭಿಮಾನಿಯೊಬ್ಬರು ‘ದೃಶ್ಯಂ’-3 ದಿ ಕನ್‌ಕ್ಲೂಷನ್ʼ ಎನ್ನುವ ಪೋಸ್ಟರ್‌ ನ್ನು ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟರ್‌ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಆ.17 ರಂದು ದೃಶ್ಯಂ ಮೂರನೇ ಭಾಗದ ಬಗ್ಗೆ ಮಾಹಿತಿ ಹೊರ ಬೀಳಲಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!