August 14, 2026
Friday, August 14, 2026
spot_img

ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ‘ಸಲಾರ್ 2’ ಶೂಟಿಂಗ್ ಆರಂಭಕ್ಕೆ ಕೌಂಟ್‌ಡೌನ್ ಸ್ಟಾರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ‘ಸಲಾರ್’ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ಹವಾ ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಸೂಪರ್ ಹಿಟ್ ‘ಉಗ್ರಂ’ ಕಥೆಯನ್ನೇ ಹೆಚ್ಚು ಭವ್ಯವಾಗಿ, ಹೊಸ ಟ್ವಿಸ್ಟ್‌ಗಳೊಂದಿಗೆ ತೆರೆಗೆ ತಂದಿದ್ದ ನೀಲ್, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಆದರೆ ಮೊದಲ ಭಾಗದ ನಂತರ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ನಡುವೆ ಭಿನ್ನಾಪ್ರಾಯ ಮೂಡಿದೆ, ಸಲಾರ್ 2 ನಿಂತೇ ಹೋಯಿತು ಎಂಬಿತ್ಯಾದಿ ಗಾಳಿ ಸುದ್ದಿಗಳು ಹರಿದಾಡಿದ್ದವು. ಇದೀಗ ಆ ಎಲ್ಲಾ ಅಪಪ್ರಚಾರಗಳಿಗೆ ತೆರೆ ಬಿದ್ದಿದ್ದು, ‘ಸಲಾರ್ 2’ ತಂಡ ಅಧಿಕೃತವಾಗಿ ಕೆಲಸ ಆರಂಭಿಸಿದೆ.

‘ಶೌರ್ಯಾಂಗ ಪರ್ವಂ’ ಪ್ರೀ-ಪ್ರೊಡಕ್ಷನ್ ಕಾರ್ಯ ಚುರುಕು

ಪ್ರಶಾಂತ್ ನೀಲ್ ಪ್ರಸ್ತುತ ಜೂ. ಎನ್‌ಟಿಆರ್ ಅಭಿನಯದ ‘ಡ್ರ್ಯಾಗನ್’ ಸಿನಿಮಾದ ಅಂತಿಮ ಹಂತದ ಚಿತ್ರೀಕರಣದಲ್ಲಿದ್ದಾರೆ. ಎನ್‌ಟಿಆರ್ ಅವರಿಗೆ ಇತ್ತೀಚೆಗೆ ಭುಜದ ಶಸ್ತ್ರಚಿಕಿತ್ಸೆಯಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಈ ಸಿಕ್ಕ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ನೀಲ್, ‘ಸಲಾರ್ 2: ಶೌರ್ಯಾಂಗ ಪರ್ವಂ’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಭರದಿಂದ ಸಾಗಿಸುತ್ತಿದ್ದಾರೆ. ಲೊಕೇಶನ್ ಕಂಟಕ, ಸೆಟ್ ಡಿಸೈನ್, ಪಾತ್ರವರ್ಗದ ಕಾಲ್‌ಶೀಟ್ ಹಾಗೂ ಚಿತ್ರಕಥೆಯ ಫೈನ್-ಟ್ಯೂನಿಂಗ್ ಕೆಲಸಗಳಲ್ಲಿ ನಿರ್ದೇಶಕರ ತಂಡ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.

ಸ್ಟಾರ್ ಸಿನಿಮಾಗಳ ನಡುವೆ ಪ್ರಭಾಸ್ ಸಾಥ್

ಮತ್ತೊಂದೆಡೆ ನಾಯಕ ನಟ ಪ್ರಭಾಸ್ ಕೂಡ ಸಾಲು ಸಾಲು ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಫೌಜಿ’ ಸಿನಿಮಾವನ್ನು ಪೂರ್ಣಗೊಳಿಸಿರುವ ಅವರು, ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಹಾಗೂ ‘ಕಲ್ಕಿ 2898 AD’ ಸೀಕ್ವೆಲ್ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇವುಗಳು ಪೂರ್ಣಗೊಳ್ಳುತ್ತಿದ್ದಂತೆ ಪ್ರಭಾಸ್ ‘ಸಲಾರ್ 2’ ಸೆಟ್‌ಗೆ ಧುಮುಕಲಿದ್ದಾರೆ. ‘ಡ್ರ್ಯಾಗನ್’ ಬಿಡುಗಡೆಯಾಗುತ್ತಿದ್ದಂತೆಯೇ ಸಲಾರ್ 2 ಕ್ಯಾಮೆರಾ ಚಾಲನೆಗೊಳ್ಳಲಿದ್ದು, ಮತ್ತೊಂದು ಸಿನೆಮ್ಯಾಟಿಕ್ ವಂಡರ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !