ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ರೈಲ್ವೆ AC ಎಕಾನಮಿ ಟಿಕೆಟ್‌ ದರ ಇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನೀಡಿದೆ. ಮಾರ್ಚ್‌ 22 ರಿಂದ ಜಾರಿಗೆ ಬರುವಂತೆ ರೈಲ್ವೆಯ ಎಸಿ-3 ಎಕಾನಮಿ ದರ್ಜೆಯಸ ಸೀಟ್‌ಗಳ ಟಿಕೆಟ್‌ಗಳ ದರವನ್ನು ಕಡಿಮೆ ಮಾಡಿ ಆದೇಶ ಹೊರಡಿಸಿದೆ.

ಬುಧವಾರದಿಂದಲೇ ಇದು ಎಲ್ಲಾ ಕಡೆ ಜಾರಿಯಾಗಿದೆ. ಇದರೊಂದಿಗೆ ಈ ಹಿಂದೆ ಇದ್ದ ಈ ಕೋಚ್‌ಗಳಲ್ಲಿ ಬೆಡ್‌ಶೀಟ್‌ಗಳನ್ನು ನೀಡುವ ವ್ಯವಸ್ಥೆಯೂ ಆರಂಭವಾಗಲಿದೆ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ರೈಲ್ವೇ ಅಧಿಕಾರಿಗಳ ಪ್ರಕಾರ, ಆನ್‌ಲೈನ್‌ನಲ್ಲಿ ಮತ್ತು ಕೌಂಟರ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದ ಪ್ರಯಾಣಿಕರಿಗೆ ಮುಂಚಿತವಾಗಿ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಹೆಚ್ಚುವರಿ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ .

ಕಳೆದ ವರ್ಷ ರೈಲ್ವೇ ಎಸಿ-3 ಎಕಾನಮಿ ದರ್ಜೆಯ ಟಿಕೆಟ್‌ಗಳು ಹಾಗೂ ಎಸಿ-3 ದರ್ಜೆಯ ಟಿಕೆಟ್‌ಗಳಿಗೆ ಒಂದೇ ರೀತಿಯ ಬೆಲೆ ನಿಗದಿ ಮಾಡಲಾಗಿತ್ತು. ಆದರೆ, ಈಗ ಎಸಿ-3 ಎಕಾನಮಿ ದರ್ಜೆಯ ಟಿಕೆಟ್‌ಗಳ ಬೆಲೆಯನ್ನು ಕಡಿಮೆ ಮಾಡಿ ಆದೇಶವನ್ನು ಪ್ರಕಟಿಸಿದೆ. ಇನ್ನು ಎಕಾನಮಿ ಎಸಿ ಕೋಚ್‌ಗಳಲ್ಲಿ ಹಿಂದಿನಂತೆಯೇ ಬ್ಲಾಂಕೆಟ್‌ಗಳು ಮತ್ತು ಬೆಡ್‌ಶೀಟ್‌ಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಮೊತ್ತ ನೀಡುವ ಅಗತ್ಯವಿಲ್ಲ ಎಂದೂ ಹೇಳಿದೆ.

ರೈಲ್ವೇ ಮಂಡಳಿ ಎಸಿ-3 ಎಕಾನಮಿ ದರ್ಜೆಯ ಕೋಚ್‌ ಗಳಲ್ಲಿ ಎಸಿ-3 ಕೋಚ್‌ಗಳಿಂತ ದರ ಶೇ. 6 ರಿಂದ 7 ರಷ್ಟು ಕಡಿಮೆ ಇರುತ್ತದೆ. ರೈಲ್ವೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಎಸಿ-3 ದರ್ಜೆಯ ಕೋಚ್‌ಗಳಲ್ಲಿ ಬಟ್ಟು 72 ಸೀಟ್‌ಗಳು ಇರುತ್ತದೆ. ಇನ್ನು ಎಸಿ-3 ಎಕಾನಮಿ ದರ್ಜೆಯಲ್ಲಿ 80 ಸೀಟ್‌ಗಳು ಇರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!