ಪ್ರಯಾಣಿಕರಿಗೆ ಸಿಹಿ ಸುದ್ದಿ: ಇನ್ಮುಂದೆ ಮನೆಯಿಂದಲೇ ನೋಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೌಂದರ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (BIAL) ಇತ್ತೀಚೆಗೆ ಉದ್ಘಾಟನೆಗೊಂಡಿರುವ 2ನೇ ಟರ್ಮಿನಲ್​ನ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇನ್ಮುಂದೆ ನಾವು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿಲ್ಲ. ಅದರ ಬದಲಾಗಿ ನಮ್ಮ ಮನೆಯಲ್ಲೇ ಕುಳಿತು ಸೌಂದರ್ಯವನ್ನು ಸವಿಯಬಹುವುದು.

ಇದಕ್ಕಾಗಿ ಮೊದಲ ಹಂತದ ‘ಬಿಎಲ್​ಆರ್ ಮೆಟಾಪೋರ್ಟ್ (BLR Metaport) ಯೋಜನೆಗೆ ಚಾಲನೆ ನೀಡಿರುವುದಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (BLR Airport) ಆಡಳಿತ ತಿಳಿಸಿದೆ. ಈ ಮೂಲಕ ವಿಶ್ವದಲ್ಲೇ ‘ಮೆಟಾವರ್ಸ್’​ನಲ್ಲಿ ಕಾಣಿಸಿಕೊಂಡ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ.

ಅಮೆಜಾನ್, ಹಾಗೂ ಪಾಲಿಗಾನ್‌ ಸಹಯೋಗದಲ್ಲಿ ‘BLR ಮೆಟಾಪೋರ್ಟ್’ಅನ್ನು ಪರಿಚಯಿಸಿದೆ. ಇದರ ಮತ್ತೊಂದು ವಿಶೇಷವೆಂದರೆ, BLR ಮೆಟಾಪೋರ್ಟಿನ ಮೂಲಕ 2ನೇ ಟರ್ಮಿನಲ್‌ಅನ್ನು 3ಡಿ ಅನುಭವದೊಂದಿಗೆ ವೀಕ್ಷಿಸಬಹುದಾಗಿದೆ.

ಇದು ಸಂಪೂರ್ಣ ಡಿಜಿಟಲ್ ಅನುಭವವನ್ನು ನೀಡಲಿದೆ. ಆಸಕ್ತ ಪ್ರಯಾಣಿಕರು ಮತ್ತು ಸಾರ್ವಜನಿಕರು www.blrmetaport.com ಗೆ ಲಾಗ್‌ಆನ್‌ ಆಗಬಹುದು. ಈ ಮೂಲಕ ತಾಜಾ ವರ್ಚುವಲ್ ಅನುಭವವನ್ನು ಪಡೆಯಬಹುದಾಗಿದೆ.

ಇನ್ನು ‘ಬಿಎಲ್​ಆರ್ ಮೆಟಾಪೋರ್ಟ್’ ಮೂಲಕ ವಿಮಾನ ನಿಲ್ದಾಣದ ಟರ್ಮಿನಲ್​ 2ರ ವರ್ಚುವಲ್ ಅನುಭವ ಮಾತ್ರವಲ್ಲದೆ ಇತರ ಹಲವು ಸೇವೆಗಳೂ ಲಭ್ಯವಿವೆ.ಪ್ರಯಾಣಿಕರು ವಿಮಾನ ನಿಲ್ದಾಣದ ಸಿಬ್ಬಂದಿ ಜತೆ ಸಂವಹನ ನಡೆಸಬಹುದು. ವಿಮಾನಗಳ ವೇಳಾಪಟ್ಟಿ ಪರಿಶೀಲನೆ, ಶಾಪಿಂಗ್, ಇತರ ಪ್ರಯಾಣಿಕರ ಜತೆ ಸಂಪರ್ಕ ಸಾಧಿಸಲೂ ಸಾಧ್ಯವಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!