ಶಿಕ್ಷಕರು ಇನ್ನಷ್ಟು ಸ್ಟ್ರಾಂಗ್: ಶಾಲೆಗೆ ಗನ್ ಕೊಂಡೊಯ್ಯಲು ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ದಕ್ಷಿಣ ರಾಜ್ಯ ಟೆನ್ನೇಸಿಯ ಶಿಕ್ಷಕರಿಗೆ ಹ್ಯಾಂಡ್‌ಗನ್ ತಮ್ಮ ಜೊತೆ ಇರಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ವರ್ಷದ ಹಿಂದೆ ನಾಶ್‌ವಿಲ್ಲೆಯ ಶಾಲೆಯೊಂದರಲ್ಲಿ ಆಗಂತುಕನೋರ್ವ ನಡೆಸಿದ್ದ ಗುಂಡಿನ ದಾಳಿಗೆ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ಶಾಲಾ ಸಿಬ್ಬಂದಿ ಸಾವನ್ನಪ್ಪಿದ ಬೆನ್ನಿಗೇ ಸುರಕ್ಷತೆಯ ಬಗ್ಗೆ ಕೂಗು ವ್ಯಾಪಕವಾಗಿ ಕೇಳಿಸಲಾರಂಭಿಸಿದ್ದು, ಶಾಲೆಗಳಿಗೆ ಹ್ಯಾಂಡ್‌ಗನ್ ತೆಗೆದುಕೊಂಡು ಹೋಗಲು ಅನುಮತಿ ನೀಡಬೇಕು ಎಂಬ ಕೂಗು ಶಿಕ್ಷಕರ ಕಡೆಯಿಂದ ಮುನ್ನೆಲೆಗೆ ಬಂದಿತ್ತು. ಇದೀಗ ಈ ಪತ್ತಾಯಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮಸೂದೆಗೆ ಟೆನ್ನೇಸಿ ಶಾಸನಸಭೆ ಅನುಮೋದನೆ ನೀಡಿದೆ.

ಆದರೆ 40 ತಾಸುಗಳ ತರಬೇತಿ, ಪೊಲೀಸರ ಅನುಮತಿ, ಮಾನಸಿಕ ಸ್ಥಿತಿಯ ಬಗ್ಗೆ ಮನಶಾಸ್ತ್ರಜ್ಞರ ಪ್ರಮಾಣಪತ್ರ ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ಪೂರೈಸಿದ ಶಿಕ್ಷಕರು, ಇತರೆ ಸಿಬ್ಬಂದಿಗಳಿಗೆ ಮಾತ್ರವೇ ಶಾಲೆಗೆ ಗನ್ ತೆಗೆದುಕೊಂಡು ಹೋಗಲು ಅವಕಾಶ ಸಿಗಲಿದೆ. ಈ ನಡುವೆ ಆಡಳಿತದ ಈ ನಿರ್ಧಾರಕ್ಕೆ ವಿರೋಧಗಳೂ ಕೇಳಿಬಂದಿದ್ದು, ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನೆಗಳೂ ಆರಂಭವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!