Friday, August 19, 2022

Latest Posts

ಸಿದ್ದರಾಮಯ್ಯ ರಾಜಕೀಯವಾಗಿ ಸ್ಕೋರ್ ಮಾಡಲು ಪ್ರಯತ್ನ ಮಾಡ್ತಿದ್ದಾರೆ : ಸಚಿವ ಶ್ರೀರಾಮುಲು

ದಿಗಂತ ವರದಿ ಕಲಬುರಗಿ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವಾಗಿ ಸ್ಕೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಅವರು ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ದ್ವೇಷ ಭಾವನೆ ಬಿತ್ತಿದ್ದು ಬಿಜೆಪಿ ಎನ್ನುವ ಸಿದ್ದರಾಮಯ್ಯ ಹೇಳಕೆಗೆ ತಿರುಗೇಟು ನೀಡಿದರು.

ಕ್ರಿಕೆಟ್ ಮತ್ತು ಇತರ ಕ್ರೀಡೆಗಳಲ್ಲಿ ಆಟಗಾರರು ಯಾವ ರೀತಿ ಸ್ಕೋರ್ ಮಾಡುತ್ತಾರೆಯೋ, ಸಿದ್ದರಾಮಯ್ಯ ಅವರು ಅದೇ ರೀತಿಯಲ್ಲಿ ರಾಜಕೀಯವಾಗಿ ಸ್ಕೋರ ಮಾಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಅವರು ಪಾಲಿಟಿಕಲ್ ಸ್ಕೋರ ಮಾಡಲು ಯತ್ನಿಸುತ್ತಿರುವ ಹಾಗೇ, ನಾನು ಅವರ ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುವುದಿಲ್ಲ ಎಂದರು. ಹಿಜಾಬ್ ವಿಚಾರವು ನ್ಯಾಯಾಲಯದಲ್ಲಿರುವದರಿಂದ ನಾನೇನೂ ಹೆಚ್ಚಾಗಿ ಈ ಹಂತದಲ್ಲಿ ಮಾತನಾಡಲಾರೆ ಎಂದರು.

ಕಲಬುರಗಿ ಯಲ್ಲಿ ಮೊದಲ ಬಾರಿಗೆ 371(ಜೆ) ಸಚಿವ ಸಂಪುಟದ ಉಪ ಸಮಿತಿ ಸಭೆಯೂ ಎಂಟು ವಷ೯ಗಳ ಬಳಿಕ ಕಲ್ಯಾಣ ಕನಾ೯ಟಕ ಪ್ರದೇಶಾಭಿವೃದ್ದಿ ಮಂಡಳಿಯ ಸಭಾಂಗಣದಲ್ಲಿ ನಡೆಯುತ್ತಿದೆ,ಹೀಗಾಗಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದೇನೆ ಎಂದರು.

ಉಪ ಸಮಿತಿ ಸಭೆಗೆ ಹಲವರು ಗೈರು

ಕಲ್ಯಾಣ ಕನಾ೯ಟಕ ಭಾಗದ ಸಚಿವ ಸಂಪುಟದ ಉಪ ಸಮಿತಿ ಸಭೆಗೆ ಹಲವು ಸಚಿವರು ಗೈರಾದರು. ಅಧ್ಯಕ್ಷ ಶ್ರೀರಾಮುಲು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಬಿಟ್ಟರೆ, ಪ್ರಭು ಚವ್ವಾಣ, ಆನಂದ ಸಿಂಗ್,ಹಾಲಪ್ಪಾ ಆಚಾರ, ಸೇರಿದಂತೆ ಬಹುತೇಕ ಸಚಿವರು ಗೈರಾಗಿದ್ದು ಕಂಡು ಬಂದಿದೆ. ಅವರು ಪಾಲಿಟಿಕಲ್ ಸ್ಕೋರ ಮಾಡಲು ಯತ್ನಿಸುತ್ತಿರುವ ಹಾಗೇ, ನಾನು ಅವರ ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುವುದಿಲ್ಲ ಎಂದರು.

ಕಲ್ಯಾಣ ಕನಾ೯ಟಕದ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಭಾಗವಹಿಸಲು ಮೊದಲ ಬಾರಿಗೆ ಕಲಬುರಗಿ ಗೆ ಬಂದಿದ್ದು, ಈ ಭಾಗದ ಹಲವು ಸಮಸ್ಯೆ ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಭೆಗೆ ಆಗಮಿಸಿದ್ದೇನೆ ಎಂದರು. 8 ವಷ೯ದ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಭಾಗವಹಿಸಿ, ಈ ಭಾಗದ ಅನೇಕ ನೇಮಕಾತಿ, ಮುಂಬಡ್ತಿ ಬಗ್ಗೆ ಕುಲಂಕುಶವಾಗಿ ಚಚೆ೯ ಮಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಅಧ್ಯಕ್ಷರ ನೇತೃತ್ವದ ಲ್ಲಿ ಸಭೆ ನಡೆಸುತ್ತಿದ್ದೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!