ʼಗುಡ್ ಬೈʼ ಬಿಡುಗಡೆಗೆ ಮುನ್ನ ದೆಹಲಿಯ ಗುರುದ್ವಾರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಅಮಿತಾಭ್ ಬಚ್ಚನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಗುಡ್ ಬೈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಬಿರುಸಿನ ಪ್ರಚಾರ ನಡೆಸುತ್ತಿದೆ.
ದೆಹಲಿಯಲ್ಲಿ ತಮ್ಮ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿರುವ ರಶ್ಮಿಕಾ ಮಂದಣ್ಣ ದೆಹಲಿಯ ಹೃದಯಭಾಗದಲ್ಲಿರುವ ಗುರುದ್ವಾರ ಬಾಂಗ್ಲಾ ಸಾಹಿಬ್‌ಗೆ ತೆರಳಿ ಚಿತ್ರ ಬಿಡುಗಡೆಗೆ ಮುನ್ನ ಆಶೀರ್ವಾದ ಪಡೆದಿದ್ದಾರೆ. ಕನ್ನಡಿಗಳ ಕಸೂತಿಯಿರುವ ನೀಲಿ ಬಣ್ಣದ ಹೂವಿನ ಕುರ್ತಾ ಜೊತೆಗೆ ಶರಾರಾ ಹಾಗೂ ಅದಕ್ಕೆ ಹೊಂದಿಕೆಯಾಗುವ ದುಪಟ್ಟಾ ಧರಿಸಿರುವ ರಶ್ಮಿಕ ಸಾಂಪ್ರದಾಯಕ ವಸ್ತ್ರ ಧರಿ ಸಿಖ್ಖರ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ.. 
ಗುಡ್‌ಬೈ ಚಿತ್ರದ ಮೂಲಕ ಅಮಿತಾಭ್ ಬಚ್ಚನ್ ಮತ್ತು ನೀನಾ ಗುಪ್ತಾ ಅವರೊಂದಿಗೆ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರುವ ʼಗುಡ್‌ಬೈʼ ಟ್ರೈಲರ್ ಸಿನಿರಸಿಕರ ಗಮನ ಸೆಳೆದಿದೆ. ಪ್ರತಿ ಕುಟುಂಬದಲ್ಲಿ ಇರುವ ಏರಿಳಿತಗಳು, ಪ್ರಕ್ಷುಬ್ಧತೆ, ಮತ್ತು ಪ್ರೀತಿ ಕಥೆ ಇರುವುದನ್ನು ಇದು ಸೂಚಿಸುತ್ತದೆ.
ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಎವಿ ಅವ್ರಾಮ್, ಸುನಿಲ್ ಗ್ರೋವರ್, ಸಾಹಿಲ್ ಮೆಹ್ತಾ ಮತ್ತು ಅಭಿಷೇಕ್ ಖಾನ್ ಇದ್ದಾರೆ. ಗುಡ್ ಕಂ ಸಹಯೋಗದೊಂದಿಗೆ ಏಕ್ತಾ ಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿರುವ ಗುಡ್ ಬೈ ಅಕ್ಟೋಬರ್ 7, 2022 ರಂದು ವಿಶ್ವಾದ್ಯಂತ ಬಿಡುಗಡೆ ಕಾಣಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!