Wednesday, November 30, 2022

Latest Posts

ಗೂಡ್ಸ್ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಹೊಸದಿಗಂತ ವರದಿ ಬೀದರ್:  

ಹೈವೆ ರಸ್ತೆಯಲ್ಲಿ ಚಲಿಸುತಿದ್ದ ಬೈಕ್‍ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಸಮಿಪ ಜರುಗಿದೆ.

ಬೇಮಳಖೇಡಾ ಗ್ರಾಮದ ನಿವಾಸಿ ನರಸಿಂಗ್ ಭೀಮಶಾ ಮೇತ್ರೆ (31)ಮೃತ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿ-65ರ ಮೇಲಿಂದ ತಡೋಳಾ ಗ್ರಾಮದಿಂದ ರಾಜೇಶ್ವರ ಗ್ರಾಮದ ಕಡೆಗೆ ತೆರಳುತಿದ್ದಾಗ ಎದುರಿನಿಂದ ಬಂದ ಗೂಡ್ಸ್ ವಾಹನ ಡಿಕ್ಕಿಯಾಗಿ ಘಟನೆ ಸಂಭವಿಸಿದ್ದು, ಸುದ್ದಿ ತಿಳಿದು ಸಿಪಿಐ ಸುಶಿಲ್‍ಕುಮಾರ, ಪಿಎಸ್‍ಐ ಸಿದ್ಧರಾಯ ಬಳೂರಗಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!