Tuesday, March 28, 2023

Latest Posts

ಖೇಲೋ ಇಂಡಿಯಾ ಯೂತ್ ಗೇಮ್ಸ್‌: ಚಿನ್ನ ಗೆದ್ದ ನಟ ಮಾಧವನ್ ಪುತ್ರ ವೇದಾಂತ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ(Khelo India) ಯೂತ್ ಗೇಮ್ಸ್‌ನಲ್ಲಿ ನಟ ಆರ್ ಮಾಧವನ್(R. Madhavan) ಅವರ ಪುತ್ರ ವೇದಾಂತ್ ಮಾಧವನ್(vedaant madhavan) ಚಿನ್ನದ ಪದಕ ಗೆದ್ದಿದ್ದಾರೆ.

200 ಮೀಟರ್​ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ವೇದಾಂತ್ ಮಾಧವನ್, ‘ಖೇಲೋ ಇಂಡಿಯಾ ನನ್ನ ಮೆಚ್ಚಿನ ಸ್ಪರ್ಧೆಗಳಲ್ಲಿ ಒಂದಾಗಿದೆ. ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಡಬೇಕು ಎಂಬುದು ನನ್ನ ಕನಸು. ಇದಕ್ಕಾಗಿ ಶ್ರಮಿಸುತ್ತಿದ್ದೇನೆ’ ಎಂದರು.

2022ರಲ್ಲಿ ಡೆನ್ಮಾರ್ಕ್‌ನ ಕೋಪನ್‌ ಹೇಗನ್‌ನಲ್ಲಿ ನಡೆದ ಡ್ಯಾನಿಶ್‌ ಓಪನ್ ಈಜುಕೂಟದಲ್ಲಿ 800 ಮೀಟರ್ಸ್‌ ಹಾಗೂ 1500 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇದಾಂತ್‌ ಮಾಧವನ್ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಚಿನ್ನ ಮತ್ತು ಬೆಳ್ಳಿ ಪದಕ ಜಯಿಸಿದ್ದರು. 800 ಮೀಟರ್ಸ್ ಗುರಿಯನ್ನು 8 ನಿಮಿಷ 17.28 ಸೆಕೆಂಡ್‌ಗಳಲ್ಲಿ ತಲುಪಿ ವಿಶೇಷ ದಾಖಲೆ ಬರೆದಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!