Friday, February 3, 2023

Latest Posts

ಕಾಯಿಲೆ ಬಗ್ಗೆ ಗೂಗಲ್ ಸರ್ಚ್, ಹೆದರಿದ ಟೆಕ್ಕಿ ಆತ್ಮಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ವಿನಯ್ ತಮ್ಮ ಕಾಯಿಲೆ ಬಗ್ಗೆ ಗೂಗಲ್ ಸರ್ಚ್ ಮಾಡಿದ್ದಾರೆ. ಸ್ಟ್ರೋಕ್ ಸಾಧ್ಯತೆ ಇದೆ ಎಂದು ತಿಳಿದಿದ್ದೇ ಖಿನ್ನತೆಗೆ ಜಾರಿದ್ದಾರೆ.

ಖಿನ್ನತೆಯಿಂದ ಟೆಕ್ಕಿ ನೈಟ್ರೋಜನ್ ಗ್ಯಾಸ್ ಬಳಸಿ ಕಾರ್‌ನಲ್ಲಿಯೇ ಮೃತಪಟ್ಟಿದ್ದಾರೆ.
ಆರೋಗ್ಯ ಕೈಕೊಟ್ಟ ಕಾರಣದಿಂದ ಅದಾಗಲೇ ವಿನಯ್ ಖಿನ್ನತೆಗೆ ಜಾರಿದ್ದರು.
ನೈಟ್ರೋಜನ್ ಗ್ಯಾಸ್ ಬಗ್ಗೆ ಗೂಗಲ್ ಮಾಡಿದ್ದ ವಿನಯ್ ತಮ್ಮ ಮುಖಕ್ಕೆ ಕವರ್ ಕಟ್ಟಿಕೊಂಡು ಗ್ಯಾಸ್ ಬಿಟ್ಟುಕೊಂಡು ಮೃತಪಟ್ಟಿದ್ದಾರೆ.

ಅವರ ಫೋನ್‌ನ ಗೂಗಲ್ ಹಿಸ್ಟರಿ ನೋಡಿದಾಗ, ಖಾಯಿಲೆ ಬಗ್ಗೆ ಗೂಗಲ್ ಮಾಡಿರುವುದು ಹಾಗೂ ಆತ್ಮಹತ್ಯೆ ಬಗ್ಗೆ ಗೂಗಲ್ ಮಾಡಿರುವುದು ಕಾಣುತ್ತದೆ. ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಬಂದು ಕಾರ್ ತೆರೆದಾಗ ವಿನಯ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವಿನಯ್ ಕೊನೆಯುಸಿರೆಳೆದಿದ್ದಾರೆ.

ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುವ ವಿನಯ್ ಐಷಾರಾಮಿ ಜೀವನ ನಡೆಸುತ್ತಿದ್ದರು. ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದರು. ಮಾನಸಿಕ ನೆಮ್ಮದಿಯಿಲ್ಲದೇ ಆತ್ಮಹತ್ಯೆ ದಾರಿ ಹಿಡಿದಿದ್ದು ದುರಂತವೇ ಸರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!