Thursday, February 2, 2023

Latest Posts

‘ಬಿಕಿನಿ ಹಾಕಿದರೂ ಸಮಸ್ಯೆ, ಹಿಜಾಬ್ ಧರಿಸಿದ್ರೂ ಸಮಸ್ಯೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಠಾಣ್ ಸಿನಿಮಾ ಹಾಡು ಬೇಷರಮ್ ರಂಗ್ ಎಲ್ಲೆಡೆ ಸಂಚಲನ ಸೃಷ್ಟಿಸಿದೆ.
ಹಾಡಿನ ಪರ ವಿರೋಧ ಚರ್ಚೆಯಾಗುತ್ತಿದ್ದು, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಈ ಬಗ್ಗೆ ಮಾತನಾಡಿದ್ದಾರೆ.

ಕೆಲವರು ಜನರಲ್ಲಿ ಧಾರ್ಮಿಕ ದ್ವೇಷ ಬಿತ್ತಲು ಹುನ್ನಾರ ನಡೆಸಿದ್ದಾರೆ. ಇದು ಸಿದ್ಧಾಂತದ ಬಗ್ಗೆ ಅಲ್ಲ, ಒಂದು ವರ್ಗದವರಿಂದ ಯೋಜಿತ ಪಿತೂರಿ. ಹಿಜಾಬ್ ಧರಿಸಿದರೂ ಸಮಸ್ಯೆ, ಬಿಕಿನಿ ತೊಟ್ಟರೂ ಸಮಸ್ಯೆ, ಹೆಣ್ಣುಮಕ್ಕಳು ಏನು ಮಾಡಿದರೂ ಕೆಲವರಿಗೆ ಸಮಸ್ಯೆ ಇದೆ ಎಂದಿದ್ದಾರೆ.

ಮಹಿಳೆಯರ ಜೀವನವನ್ನು ಈಗಲೂ ನಿಯಂತ್ರಿಸುವ ಮಂದಿ ಇದ್ದಾರೆ. ಇಂಥದ್ದೇ ಬಟ್ಟೆ ಹಾಕಿ, ಇಂಥದ್ದೇ ಟಿವಿ ನೋಡಿ, ಹೀಗೆ ಮಾತನಾಡಿ, ಹೀಗೆ ನಡೆದುಕೊಳ್ಳಿ. ಪ್ರತಿ ಹೆಜ್ಜೆಗೂ ನಿಯಂತ್ರಣ ಇದ್ದದ್ದೇ ಎಂದಿದ್ದಾರೆ. ಇದೇ ಮುಂದುವರಿದರೆ ಮುಂದಿನ ಕಥೆ ಏನು ಎನ್ನುವ ಭಯ ಆರಂಭವಾಗಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!