ಸಿಕ್ಕ ಚಿನ್ನದ ಸರವನ್ನು ಠಾಣೆಗೆ ತಲುಪಿಸಿ ಮಾನವೀಯತೆ ಮೆರೆದ ಯುವಕ

 ಹೊಸ ದಿಗಂತ ವರದಿ, ನಾಗಮಂಗಲ:

ಸಂಬಂಧಿಕರ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದ ಯುವಕನೊಬ್ಬನಿಗೆ ಆಕಸ್ಮಿಕವಾಗಿ ಸಿಕ್ಕ 33 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಚಂದ್ರಶೇಖರ್ ಎಂಬುವರೆ ಸರವನ್ನು ಪೊಲೀಸರಿಗೆ ಒಪ್ಪಿಸಿ ಮಾನವೀಯತೆ ಮೆರೆದ ವ್ಯಕ್ತಿಯಾಗಿದ್ದು, ತನ್ನ ಸಂಬಂಧಿ ಮದುವೆಗೆಂದು ನಾಗಮಂಗಲಕ್ಕೆ ಬಂದಿದ್ದರು ರಾತ್ರಿ ಉಳಿದುಕೊಳ್ಳಲು ರೂಮ್ ಮಾಡಲು ತೆರಳಿದಾಗ ಆಕಸ್ಮಿಕವಾಗಿ ಸಿಕ್ಕ 33 ಗ್ರಾಂ ಚಿನ್ನದ ಸರ ಸಿಕ್ಕಿದೆ. ಸಿಕ್ಕ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿ ಸರ ಕಳೆದುಕೊಂಡ ವಾರಸುದಾರರಿಗೆ ತಲುಪಿಸಿ ಎಂದು ನಾಗಮಂಗಲ ಪಟ್ಟಣದ ಪೊಲೀಸ್ ಠಾಣೆಯ ಪಿ.ಎಸ್.ಐ.ರವಿಶಂಕರ್ ಅವರಿಗೆ ಒಪ್ಪಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಚಿನ್ನದ ಸರಗಳ ಕಳ್ಳತನ ಹಾಗೂ ಮನೆಕಳ್ಳತನ ಸಾಮಾನ್ಯವಾಗಿ ನೋಡುತ್ತಲೇ ಇರುತ್ತೇವೆ ಆದರೆ ಈ ಯುವಕ ಚಂದ್ರಶೇಖರ್ ಸಿಕ್ಕಿದ 33 ಗ್ರಾಂ ಚಿನ್ನದ ಸರವನ್ನು ವಾರಸುದಾರರಿಗೆ ತಲುಪಿಸಿ ಎಂದು ಠಾಣೆಗೆ ಬಂದು ಮನವಿ ಮಾಡಿಕೊಂಡಿರುವ ಅಪರೂಪದ ಘಟನೆ ನಾಗಮಂಗಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದಿದೆ
ಚಂದ್ರಶೇಖರ್ ರವರು ಮೂಲತ ಹಾಸನ ಜಿಲ್ಲೆ ಅರಿಸಿಕೆರೆ ಟೌನ್ ನಿವಾಸಿ ಪ್ರಸ್ತುತ ಮೈಸೂರಿನ ಎಸ್ಕಾರ್ಟ್ ಟ್ಯಾಕ್ಟರ್ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆ ನಿರ್ವಹಿಸುತ್ತಿದ್ದು ತನ್ನ ಸಂಬಂಧಿ ಗುರು ಎಂಬುವರ ಮದುವೆಗೆಂದು
ನಾಗಮಂಗಲ ಪಟ್ಟಣದ ಬಿಂಡಿಗನವಿಲೆ ರಸ್ತೆಯ ಕೃಷ್ಣಪ್ಪ ಕಲ್ಯಾಣಮಂಟಪಕ್ಕೆ ಕುಟುಂಬ ಸಮೇತರಾಗಿ ಭಾಗವಹಿಸಲು ಬಂದಿದ್ದರು. ರಾತ್ರಿ ಉಳಿದುಕೊಳ್ಳಲು ಟಿ.ಬಿ. ಬಡಾವಣೆಯ ಪವಿತ್ರ ಪ್ಯಾರಡೈಸ್‌ನಲ್ಲಿ ರೂಮ್ ಮಾಡಲು ತೆರಳಿದಾಗ ಆಕಸ್ಮಿಕವಾಗಿ ಸಿಕ್ಕಿದ ಚಿನ್ನದ ಸರವನ್ನು ಕಳೆದುಕೊಂಡ ವ್ಯಕ್ತಿ ಎಷ್ಟು ಕಷ್ಟ ಅನುಭವಿಸುತ್ತಿದ್ದಾರೋ ಏನೋ ಎಂಬುದಾಗಿ ತಿಳಿದು ಮಾನವೀಯತೆ ದೃಷ್ಟಿಯಿಂದ 33 ಗ್ರಾಂ ಚಿನ್ನದ ಸರವನ್ನು ಆ ವ್ಯಕ್ತಿಗೆ ತಲುಪಿಸುವಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!