Saturday, September 23, 2023

Latest Posts

ಬೇಕಾಬಿಟ್ಟಿ ವರ್ತನೆ ಮುಂದುವರೆದರೆ ಕಠಿಣ ನಿಯಮ ಜಾರಿ: ಸಚಿವ ಸಿ.ಸಿ.ಪಾಟೀಲ್

ಹೊಸದಿಗಂತ ವರದಿ,ಗದಗ:

೧ನೇ ಹಾಗೂ ೨ನೇ ಅಲೆಗಿಂತ ಒಮಿಕ್ರಾನ್ ತೀವ್ರವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದರೂ ಜನರಿಂದ ಬೇಕಾಬಿಟ್ಟಿ ವರ್ತನೆ ಮುಂದುವರೆದರೆ ಸರ್ಕಾರ ಕಠಿಣ ನಿಯಮ ಜಾರಿ ಮಾಡಬೇಕಾಗುತ್ತದೆ ಎಂದು ಸಚಿವ ಸಿ.ಸಿ ಪಾಟೀಲ ಲಾಕಡೌನ್ ಎಚ್ಚರಿಕೆ ನೀಡಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸರ್ಕಾರದ ಜೊತೆಗೆ ಜನರ ಸಹಭಾಗಿತ್ವ ಇದ್ದರೆ ಮಾತ್ರ ಮಹಾಮಾರಿ ಎದುರಿಸಲು ಸಾಧ್ಯ. ಮತ್ತೊಮ್ಮೆ ಕೆಟ್ಟ ಪರಿಸ್ಥಿತಿ ಬರಬಾರದೆಂದರೆ ನಮಗೆ ನಾವೇ ನಿಯಂತ್ರಣ ಹೇರಿಕೊಳ್ಳಬೇಕು. ಎರಡನೇಯ ಅಲೆಯಲ್ಲಿ ಸಾಕಷ್ಟು ಕಠಿಣ ಕ್ರಮ ತೆಗೆದುಕೊಂಡಿದ್ದರೂ ಸಾವುನೋವುಗಳು ಸಂಭವಿಸಿದವು. ಇಂಥಹ ಕೆಟ್ಟ ಪರಿಸ್ಥಿತಿ ಬರಬಾರದೆಂದರೆ ಎಲ್ಲರು ಪುನಃ ಮಾಸ್ಕ್ ಸಂಸ್ಕೃತಿಗೆ ಮರಳಬೇಕು ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!