April 15, 2026
Wednesday, April 15, 2026
spot_img

ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಮಾರಾಟ ತಡೆಗಟ್ಟಲು ಸರ್ಕಾರದಿಂದ ರಾಷ್ಟ್ರವ್ಯಾಪಿ ಅಭಿಯಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದಲ್ಲಿ ಎಲ್‌ಪಿಜಿ ಅಕ್ರಮ ದಾಸ್ತಾನು ಹಾಗೂ ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡರ್‍‌ ಮಾರಾಟ ತಡೆಗಟ್ಟಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು ದೇಶದಾದ್ಯಂತ ಅಭಿಯಾನ ಕೈಗೊಂಡಿದೆ. ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಜಾಗೃತೆ ವಹಿಸಲು ಈ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರಾದ್ಯಂತ ಕೈಗೊಂಡ ಅಭಿಯಾನದ ಭಾಗವಾಗಿ ಮನೆ ಬಳಕೆ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯವನ್ನು ಪತ್ತೆಹಚ್ಚುವ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿ ಪಾರದರ್ಶಕತೆ ಸಾಧಿಸುವ ನಿಟ್ಟಿನಲ್ಲಿ ಏಪ್ರಿಲ್‌ 11, 2026ರಂದು 2700 ತಪಾಸಣೆ ಮತ್ತು ದಾಳಿಯನ್ನು ಕೈಗೊಳ್ಳಲಾಗಿದೆ.

ತೈಲ ಮಾರಾಟ ಸಂಸ್ಥೆಗಳು (ಒಎಮ್‌ಸಿ) ಕೂಡ ಎಲ್‌ಪಿಜಿ ಪೂರೈಕೆ ಕೇಂದ್ರಗಳಿಗೆ ದಿಢೀರ್‍‌ ಭೇಟಿ ನೀಡಿ ತಪಾಸಣೆಗಳನ್ನು ಕೈಗೊಂಡಿದೆ. ಈ ಉಪಕ್ರಮದಲ್ಲಿ 219 ವಿತರಕರಿಗೆ ದಂಡ ವಿಧಿಸಲಾಗಿದ್ದು,ನಿಯಮ ಉಲ್ಲಂಘನೆ ಅಡಿಯಲ್ಲಿ 56 ವಿತರಕರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಒಎಮ್‌ಸಿ ಜವಬ್ದಾರಿಯುತ ಎಲ್‌ಪಿಜೆ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನೂ ಆರಂಭಿಸಿದೆ. ಕಳೆದ 8 ದಿನಗಳಲ್ಲಿ 5 ಕೆಜಿ (ಎಫ್‌ಟಿಎಲ್‌) ಸಿಲಿಂಡರ್‍‌ ಲಭ್ಯತೆ ಜೊತೆಗೆ ಎಲ್‌ಪಿಜಿ ಕುರಿತು 3,300 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈಗಾಗಲೇ 35,800 ರಷ್ಟು 5 ಕೆಜಿ ಫ್ರೀ ಟ್ರೇಡ್‌ ಎಲ್‌ಪಿಜಿ ಸಿಲಿಂಡರ್‍‌ಗಳನ್ನು ಮಾರಾಟ ಮಾಡಲಾಗಿದೆ. ಈ ಉಪಕ್ರಮಗಳು ಮನೆಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ಒತ್ತಡ ತಗ್ಗಿಸಿ ವಲಸೆ ಕಾರ್ಮಿಕರು ಹಾಗೂ ಮೂಲಸೌಕರ್ಯ ವಂಚಿತ ಕುಟುಂಬಗಳ ಅಗತ್ಯತೆಯನ್ನು ಪೂರೈಸಲು ನೆರವಾಗಿದೆ.

ಮನೆ ಬಳಕೆ ಎಲ್‌ಪಿಜಿ ಪೂರೈಕೆ ಸುಗಮವಾಗಿದ್ದು ಯಾವುದೇ ವಿತರಕ ಕೇಂದ್ರಗಳಿಂದ ಕೊರತೆ ವರದಿಯಾಗಿಲ್ಲ. ಏಪ್ರಿಲ್‌ 11, 2026 ರಂದು ರಾಷ್ಟ್ರಾದ್ಯಂತ 52.3 ಲಕ್ಷ ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್‍‌ಗಳನ್ನು ಪೂರೈಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !