September 16, 2026
Wednesday, September 16, 2026
spot_img

ಇದು 5ನೇ ಸಲ…! ಮತ್ತೆ ಅಬಕಾರಿ ಸುಂಕ ಹೆಚ್ಚಿಸೋಕೆ ರೆಡಿಯಾದ ಸರ್ಕಾರ: ರೊಚ್ಚಿಗೆದ್ದ ಮದ್ಯಪ್ರಿಯರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ನಡುವೆಯೇ ಬೆಲೆ ಏರಿಕೆ ಸರಣಿ ಮುಂದುವರಿದಿದ್ದು, ಈಗ ಮತ್ತೊಮ್ಮೆ ಮದ್ಯದ ದರ ಹೆಚ್ಚಳದ ಸಾಧ್ಯತೆ ಎದುರಾಗಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದು ಐದನೇ ಬಾರಿಗೆ ಅಬಕಾರಿ ಸುಂಕ ಪರಿಷ್ಕರಣೆ ಆಗುವ ನಿರೀಕ್ಷೆಯಿದ್ದು, ಮೇ 1ರಿಂದ ಹೊಸ ದರಗಳು ಜಾರಿಗೆ ಬರಬಹುದು ಎಂದು ತಿಳಿದುಬಂದಿದೆ.

ಸರ್ಕಾರದ ಕರಡು ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ ಮದ್ಯದ ಮೇಲೆ ವಿಧಿಸುವ ತೆರಿಗೆ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ನಿರ್ಧಾರವಾಗಲಿದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಪ್ರಮಾಣ ಹೆಚ್ಚಿದ್ದರೆ ತೆರಿಗೆ ಕೂಡ ಹೆಚ್ಚಾಗಲಿದೆ. ಈ ಹೊಸ ವ್ಯವಸ್ಥೆಯಿಂದ ಕೆಲವು ಪ್ರೀಮಿಯಂ ಬ್ರಾಂಡ್‌ಗಳ ದರ ಸ್ವಲ್ಪ ಇಳಿಯಬಹುದಾದರೂ, ಸಾಮಾನ್ಯವಾಗಿ ಬಳಸುವ ಕಡಿಮೆ ದರದ ಮದ್ಯದ ಬೆಲೆ ಶೇಕಡಾ 20ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:

ಈ ನಿರ್ಧಾರವು ಮಧ್ಯಮ ಹಾಗೂ ಕೆಳವರ್ಗದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸರ್ಕಾರದ ನಿರಂತರ ದರ ಏರಿಕೆ ಕ್ರಮಗಳಿಂದ ಮದ್ಯಪ್ರಿಯರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಬಕಾರಿ ಸುಂಕ ಪರಿಷ್ಕರಣೆಯಿಂದ ರಾಜ್ಯದ ಅಬಕಾರಿ ಆದಾಯ ಹೆಚ್ಚಾದರೂ, ಸಾಮಾನ್ಯ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !