ಸರ್ಕಾರಿ ಶಾಲೆ ಜಾಗ ಕಬಳಿಸಿದ ಗ್ರಾಮ ಪಂಚಾಯತ್ ಸದಸ್ಯೆ!

ಹೊಸದಿಗಂತ ವರದಿ, ಕಲಬುರಗಿ:

ಬೇಲಿಯೇ ಎದ್ದು ಹೊಲ ಮೇಯಿತು ಎನ್ನುವಂತೆ, ಸರ್ಕಾರಿ ಆಸ್ತಿ ಕಾಪಾಡಬೇಕಾದ ಜನಪ್ರತಿನಿಧಿ, ಈಗ ಸರ್ಕಾರಿ ಶಾಲೆಯ ಜಾಗವನ್ನೆ ಅತಿಕ್ರಮಣ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ.

ನಗರದ ಡಬರಾಬಾದ್ ಹತ್ತಿರದ ದಿನ ದಯಾಳ್ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆಯ ಜಾಗ ಕಬಳಿಸಿ ಕಾಂಪೌಂಡ್ ಆವರಣೆದಲ್ಲೆ ಭೀಮಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ನಜ್ಮಾ ಬೇಗಂ ಮನೆ ನಿರ್ಮಿಸಿದ್ದಾಳೆ. ಗ್ರಾಮ ಪಂಚಾಯತ ಸದಸ್ಯೆಯ ಈ ಅಕ್ರಮಕ್ಕೆ ಹೇಳೋರು ಕೇಳೋರು ಇಲ್ಲದಂತಾಗಿದೆ.

ಕಳೆದ 30 ವರ್ಷಗಳಿಂದ ಶಾಲೆಯ ಕಾಂಪೌಂಡ್ ಒಳಗೆ, 40×60 ಸೈಟ್ ನಲ್ಲಿ ಮನೆ ನಿರ್ಮಿಸಿ, ಸದಸ್ಯೆ ಕುಟುಂಬ ವಾಸಮಾಡುತ್ತಿದೆ, ಈ ಬಗ್ಗೆ ಶಾಲೆಯ ಶಿಕ್ಷಕರು ಪ್ರಶ್ನಿಸಿದರೆ ಪಂಚಾಯತಿ ಸದಸ್ಯೆ ಗಂಡ ರಫಿಕ್, ಶಿಕ್ಷಕರಿಗೆ ಜೀವ ಬೇದರಿಕೆ ಹಾಕುತ್ತಿದ್ದಾನೆ, ಹಾಗಾಗಿ ಶಾಲಾ ಸಿಬ್ಬಂದಿಗಳು ಮತ್ತು ಎಸ್ ಡಿ ಎಂ ಸಿ ಪದಾಧಿಕಾರಿಗಳು ಹೇದರಿಕೊಂಡು ಸುಮ್ನಾಗಿದ್ದಾರೆ ಎಂದು ಹೇಳಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳೆ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಾರೆ, ಶಾಲಾ ಅವರಣದಲ್ಲೆ ಮನೆ ನಿರ್ಮಾಣದಿಂದ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕ್ರೀಡಾ ಚಟುವಟಿಕೆಗೆ ಮೈದಾನ ಇಲ್ಲದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!