ಗ್ರಾಮ ವಾಸ್ತವ್ಯ ಜನಪ್ರಿಯ ಕಾರ್ಯಕ್ರಮ: ಸಚಿವ ಅಶೋಕ್

ಹೊಸದಿಗಂತ ವರದಿ,ಹಾವೇರಿ:

ಸ್ಥಳದಲ್ಲಿನೇ ಪರಿಹಾರ ದೊರೆಯುತ್ತಿರುವದರಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜನಪ್ರಿಯ ಕಾರ್ಯಕ್ರಮವಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಜಿಲ್ಲೆಯ ಶಿಗ್ಗಾವ ತಾಲೂಕಿನ ಬಾಡ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಗ್ರಮ ವಾಸ್ತವ್ಯ ೧೩ ನೇಯದಾಗಿದೆ. ಸ್ಥಳದಲ್ಲಿನೇ ಕಂದಾಯ ಇಲಾಖೆಯ ಕಾರ್ಯಕ್ರಮಗಳನ್ನು ಇತ್ಯರ್ಥ ಮಾಡುತ್ತಿರುವುದರಿಂದ ಸರ್ಕಾರದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಈ ಒಂದು ಕಾರ್ಯಕ್ರಮ ಮಾಡಲಾಗುತ್ತಿದೆ. ಗುಲಬರ್ಗ ಕ್ಷೇತ್ರದಲ್ಲಿ ೨೮ ಸಾವಿರ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಿದ್ದೆ ಅದಕ್ಕಿಂತಲೂ ಹೆಚ್ಚು ಜನರಿಗೆ ತಲುಪಿಸಬೇಕೆಂದು ಬಾಡ ಗ್ರಾಮಕ್ಕೆ ಬಂದಿರುವೆ ಎಂದು ಹೇಳಿದರು.

ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಗಳು ಮತ್ತು ತಹಶಿಲ್ದಾರರು ಗ್ರಾಮ ವಾಸ್ತವ್ಯ ಮಾಉತ್ತಿದ್ದಾರೆ. ಅಧಿಕಾರಿಗಳು ಕಚೇರಿಲ್ಲಿ ಕುಳಿತುಕೊಂಡು ಆಡಳಿತಮಾಡದೇ ಜನ ಸಾಮಾನ್ಯರ ಮದ್ಯದಲ್ಲಿ ಬಂದು ಅವರ ಕಷ್ಟಗಳನ್ನು ಅರಿತುಕೊಂಡು ಕೆಲಸ ಮಾಡಬೇಕೆನ್ನುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದರು.

ಸ್ಥಳೀಯರಿಗೆ ಸ್ಥಳದಲ್ಲಿನೇ ಮರಣ ಉತಾರ, ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳು ದೊರೆಯುವಂತೆ ಆಗುವುದರಿಂದ ಜನತೆ ತಿಂಗಳಾನುಗಂಟಲೆ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ ಹೀಗಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಿದರು.

ಪ್ರತಿ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಕದಕೆ ಒಂದು ಕೋಟಿ ವಿಶೇಷ ಅನುದಾನವನ್ನು ನೀಡುತ್ತ ಬರಲಾಗಿದೆ. ಈ ಅನುದಾನದಲ್ಲಿ ಆಯಾ ಗ್ರಾಮಸ್ತರು ತಿಳಿಸಿದ ಕೆಲಸಗಳನ್ನು ಮಾಡಲಾಗುವುದು ಎಂದರು.

ಅಂಗವಿಕಲರಿಗೆ ಹಾಗೂ ಕಿವಿ ಕೇಳದವರಿಗೆ ಸ್ಥಳದಲ್ಲಿನೇ ಸಾಧನಗಳ ನ್ನು ನೀಡುವ ವ್ಯವಸ್ಥೆ ಮಾಡಲಾಗುವುದರಿಂದ ಈ ಕಾರ್ಯಕ್ರಮ ಇನ್ನು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!