ಹೊಸದಿಗಂತ ವರದಿ ಮಂಡ್ಯ
ತಾಲೂಕಿನ ನೆಲಮಂಗಲದ ಪುರಾಣ ಪ್ರಸಿದ್ಧ ಕ್ಷೇತ್ರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಇದೇ ಸಂದರ್ಭ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಅಡ್ಡಪಲ್ಲಕಿ ಉತ್ಸವವು ನೆರವೇರಿತು.
ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಸಹಸ್ರಾರುಸಂಖ್ಯೆಯ ಭಕ್ತಾದಿಗಳು ಈ ಪುಣ್ಯ ಕ್ಷಣಗಳನ್ನು ಕಣ್ತುಂಬಿಕೊಂಡರು.