ಹೊಸದಿಗಂತ ವರದಿ, ಮಂಗಳೂರು:
ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಳೆದ ಐದು ದಿನಗಳ ಕಾಲ ಮಂಗಳೂರಿನ ಸಂಘನಿಕೇತನ ಗಣೇಶ ವೇದಿಕೆಯಲ್ಲಿ ಪೂಜಿಸಲ್ಪಟ್ಟ ಶ್ರೀ ವಿಘ್ನವಿನಾಯಕನ ವೈಭವದ ಶೋಭಾಯಾತ್ರೆ ಬುಧವಾರ ನೆರವೇರಿತು. ತುಂತುರು ಮಳೆಯ ನಡುವೆ ಸಾಗಿದ ಶೋಭಾಯಾತ್ರೆಗೆ ಕೇರಳ ಚಂಡೆ, ಕಲ್ಲಡ್ಕ ಬೊಂಬೆ ಬಳಗ ಕಳೆ ಹೆಚ್ಚಿಸಿದವು.
ಮಂಗಳೂರಿನ ಸಂಘನಿಕೇತನದ ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಈ ಬಾರಿ 77ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಶ್ರದ್ಧಾ ಭಕ್ತಿಯಿಂದ ಆಚರಿಸಲ್ಪಟ್ಟಿತು.
ಮಧ್ಯಾಹ್ನ 1.15ರ ಸುಮಾರಿಗೆ ಮಹಾಪೂಜೆ, ವಿಸರ್ಜನಾ ಪೂಜೆ, ಮಧ್ಯಾಹ್ನ 3.30ಕ್ಕೆ ವಾದ್ಯಗೋಷ್ಠಿ, ಸಂಜೆ 5.30ಕ್ಕೆ ಸಂಕಲ್ಪ ಕಾರ್ಯಕ್ರಮದ ಬಳಿಕ ಶೋಭಾಯಾತ್ರೆ ಆರಂಭಗೊಂಡಿತು.
ಶೋಭಾ ಯಾತ್ರೆ ಆರಂಭದ ವೇಳೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ್ ಡಾ.ಪಿ.ವಾಮನ ಶೆಣೈ, ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್, ಕೇಶವ ಸ್ಮೃತಿ ಸಂವರ್ಧನಾ ಸಮಿತಿ ಕಾರ್ಯದರ್ಶಿ ಗಜಾನನ ಪೈ, ಪ್ರಮುಖರಾದ ವಿನೋದ್ ಶೆಣೈ, ರಘುವೀರ್ ಕಾಮತ್, ಸುನೀಲ್ ಆಚಾರ್, ಆದಿದ್ರಾವಿಡ ಸೇವಾ ಸಂಘದ ಅಧ್ಯಕ್ಷ ರಘುನಾಥ ಅತ್ತಾವರ, ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಎಂ.ಸತೀಶ್ ಪ್ರಭು, ಆನಂದ ಪಾಂಗಳ, ಕೆ.ಪಿ. ಟೈಲರ್, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಕಾಮತ್, ಸ್ವಾಮಿಪ್ರಸಾದ್, ಕೋಶಾಧಿಕಾರಿ ಎಸ್.ಆರ್. ಕುಡ್ವ , ಕಾರ್ಯದರ್ಶಿಗಳಾದ ಜೀವನರಾಜ್ ಶೆಣೈ, ಅಭಿಷೇಕ್ ಭಂಡಾರಿ, ನಂದನ್ ಮಲ್ಯ, ಪ್ರಕಾಶ್ ಗರೋಡಿ ಮುಂತಾದವರು ಉಪಸ್ಥಿತರಿದ್ದರು.