ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಲಯದಲ್ಲಿ ಕಾಣಸಿಗುವ ಯಾಕ್ (ಚಮರೀ ಮೃಗ)ವನ್ನು ಆಹಾರಕ್ಕಾಗಿ ಬಳಸಲು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ.
ಈ ಪ್ರಾಣಿಯನ್ನು ಆಹಾರಕ್ಕಾಗಿ ಬಳಸಬಹುದಾದ ಪ್ರಾಣಿಯಾಗಿ ಅನುಮೋದನೆ ನೀಡಬೇಕು ಎಂದು ಕೋರಿ ಎನ್‌ಆರ್‌ಸಿ ಯಾಕ್ 2021ರಲ್ಲಿ ಎಫ್‌ಎಸ್‌ಎಸ್‌ಎಐಗೆ ಪ್ರಸ್ತಾವ ಸಲ್ಲಿಸಿತ್ತು.
ಎಫ್‌ಎಸ್‌ಎಸ್‌ಎಐ ಅನುಮೋದನೆ ಬಳಿಕ ಯಾಕ್‌ಗಳ ಹಾಲು ಮತ್ತು ಮಾಂಸವನ್ನು ಬಳಕೆ ಮಾಡಬಹುದಾಗಿರುವುದರಿಂದ ಜನರು ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಣೆ ನಡೆಸಬಹುದು ಜೊತೆಗೆ ಇದರಿಂದ ಇವುಗಳ ಸಂಖ್ಯೆ ವೃದ್ಧಿಯಾಗಲಿದೆ ಎಂದು ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ದಿರಂಗ್‌ನಲ್ಲಿರುವ ಯಾಕ್ ಕುರಿತ ರಾಷ್ಟ್ರೀಯ ಸಂಶೋಧನಾ ಕೇಂದ್ರ ಹೇಳಿದೆ.
ಹಿಮಾಲಯ ಪ್ರದೇಶದ ಪಶುಪಾಲಕ ಅಲೆಮಾರಿಗಳು ಯಾಕ್‌ನ್ನು ಕೃಷಿ ಚಟುವಟಿಕೆಗಳಿಗೆ ಹೆಚ್ಚಾಗಿ ಬಳಸುತ್ತಾರೆ.