MUST READ | ವರನಿಗೆ 10 ರೂಪಾಯಿ ನೋಟು ಎಣಿಸೋಕೆ ಬರ‍್ತಿಲ್ಲ, ಮದುವೆ ಕ್ಯಾನ್ಸಲ್ ಮಾಡಿಕೊಂಡ ವಧು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೂರು ಸುಳ್ಳು ಹೇಳಿ ಮದುವೆ ಮಾಡಿ ಅನ್ನೋ ಗಾದೆ ಇದೆ, ಆದರೆ ಇದು ಈಗ ಚಾಲ್ತಿಯಲ್ಲಿ ಇಲ್ಲ ಎಂದೇ ಹೇಳಬಹುದು.

ಫರೂಖಾಬಾದ್‌ನಲ್ಲಿ ಮದುವೆ ಮಂಟಪದಲ್ಲೇ ಮದುವೆ ನಿಂತು ಹೋಗಿದೆ. ವರನಿಗೆ ಮಾನಸಿಕ ಅಸ್ವಸ್ತತೆ ಇದ್ದು, ಅದನ್ನು ಮುಚ್ಚಿಟ್ಟು ಮದುವೆ ಮಾಡೋಕೆ ತಯಾರಾಗಿದ್ದಾರೆ. ಈ ವಿಷಯ ಮದುವೆ ಮನೆಯಲ್ಲೇ ಬಹಿರಂಗಗೊಂಡು, ವಧು ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ.

ಮದುವೆ ಮಂಟಪದಲ್ಲಿ ಕುಳಿತಾಗ, ವರ ಮಾನಸಿಕವಾಗಿ ಅಸ್ವಸ್ತನಾಗಿದ್ದಾನೆ ಎಂದು ಪೂಜಾರಿಗೆ ಅನುಮಾನ ಬಂದಿದೆ. ಶಾಸ್ತ್ರ ಎಂದು ಹೇಳಿ 10 ರೂಪಾಯಿಯ 30 ನೋಟುಗಳನ್ನು ವರನಿಗೆ ಕೊಟ್ಟು ಎಣಿಸಿ ಎಂದಿದ್ದಾರೆ.

ಎಣಿಸಲು ವರ ತಡಕಾಡಿದ್ದಾನೆ. ಪುರೋಹಿತರು ಈ ವಿಷಯವನ್ನು ವಧುವಿನ ಮನೆಯವರಿಗೆ ತಿಳಿಸಿದ್ದಾರೆ. ನಂತರ ವಧು-ವರರ ಮನೆಯವರು ಕಿತ್ತಾಡಿ, ಅದು ತಾರಕಕ್ಕೇರಿ ಮದುವೆ ಕ್ಯಾನ್ಸಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!