Thursday, March 30, 2023

Latest Posts

ವಧುವಿಗಾಗಿ ಪಾದಯಾತ್ರೆ: 28 ಕಿಲೋಮೀಟರ್ ನಡೆದು ಕಲ್ಯಾಣ ಮಂಟಪಕ್ಕೆ ಬಂದ ವರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಪಾದಯಾತ್ರೆ ಮೂಲಕ ತೆರಳಿದ ವರ ವಧುವನ್ನು ವರಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಧುವಿನ ಮನೆಗೆ ಹೋಗಲು ನಾಲ್ಕು ಕಾರುಗಳ ವ್ಯವಸ್ಥೆ ಮಾಡಲಾಗಿತ್ತು, ಆದರೆ ವರನು ರಾತ್ರಿಯಿಡೀ 28 ಕಿಲೋಮೀಟರ್ ನಡೆದು ವಧುವಿನ ಮನೆಗೆ ನಡೆದು ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ಬಂದೊದಗಿತ್ತು.

ರಾಯಗಡ ಜಿಲ್ಲೆಯ ಕಲ್ಯಾಣ್ ಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯತ್‌ನ ದಿಬಲಪಾಡು ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು.  ಅಂದುಕೊಂಡಂತೆ ಮದುವೆ ದಿನವೂ ಬಂತು, ವರನ ಮನೆಯವರು ನಾಲ್ಕು ಕಾರುಗಳ ವ್ಯವಸ್ಥೆ ಮಾಡಿದರು. ಅಷ್ಟರಲ್ಲಿ ಚಾಲಕರು ಮುಷ್ಕರಕ್ಕೆ ಇಳಿದಿದ್ದಾರೆ. ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿ, ವಧು-ವರರು ಕಾಯುತ್ತಿದ್ದಾರೆ ಹೋಗಲು ವಾಹನಗಳಿಲ್ಲ.

ಕೊನೆಗೆ ಗುರುವಾರ (ಮಾರ್ಚ್ 16, 2023) ರಾತ್ರಿ ವಧುವಿನ ಮನೆ ತಲುಪಲು ನಡೆಯಲು ಪ್ರಾರಂಭಿಸಿದರು. ರಾತ್ರಿಯೆಲ್ಲಾ ನಡೆದು ಕೊನೆಗೆ ಮರುದಿನ ಅಂದರೆ ಶುಕ್ರವಾರ ವಧುವಿನ ಗ್ರಾಮವಾದ ದಿಬಳಪಾಡು ತಲುಪಿದರು. ಹಾಗಾಗಿ ವರನು 28 ಕಿಲೋಮೀಟರ್ ನಡೆದು ವಧುವಿನ ಕೊರಳಿಗೆ ಮೂರುಗಂಟು ಹಾಕಿದ್ದಾನೆ. ಶುಕ್ರವಾರ (ಮಾರ್ಚ್ 17) ಮದುವೆ ಅದ್ಧೂರಿಯಾಗಿ ನಡೆದಿದೆ. ವರ, ಅವರ ಕುಟುಂಬದ ಸದಸ್ಯರು ರಾತ್ರಿ ವೇಳೆ ವಾಕಿಂಗ್‌ ಮಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಕ್ರವಾರ ಮುಷ್ಕರವನ್ನು ಹಿಂಪಡೆದ ಚಾಲಕರು ವಧುವನ್ನು ತಮ್ಮೊಂದಿಗೆ ಕಾರುಗಳಲ್ಲಿ ತಮ್ಮ ಗ್ರಾಮಕ್ಕೆ ಕರೆದೊಯ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!