ಮೇನಲ್ಲಿ 1.40 ಲಕ್ಷ ಕೋಟಿರೂಪಾಯಿಗೂ ಮೀರಿದ ಜಿಎಸ್‌ಟಿ ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮೇ ತಿಂಗಳಲ್ಲಿ ದಾಖಲೆಯೆ ಜಿಎಸ್‌ಟಿ ಸಂಗ್ರಹವಾಗಿದ್ದು ಒಟ್ಟೂ 1,40,885 ಕೋಟಿ ರೂಪಾಯಿಗಳಷ್ಟು ತೆರಿಗೆ ಕಲೆಹಾಕಲಾಗಿದೆ. ಇದು ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ 44% ದಷ್ಟು ಏರಿಕೆಯಾಗಿದೆ.

ಸಂಗ್ರಹವಾದ ಒಟ್ಟೂ ಮೊತ್ತದಲ್ಲಿ 25,036 ಕೋಟಿ ಕೇಂದ್ರ ಜಿಎಸ್‌ಟಿ, 32,001 ಕೋಟಿ ರಾಜ್ಯ ಜಿಎಸ್‌ಟಿ 73,345ಕೋಟಿ ರೂ. ಸಮಗ್ರ ಸರಕು ಮತ್ತು ಸೇವಾ ತೆರಿಗೆ ಹಾಗೂ 10,502 ಕೋಟಿ ರೂ. ಸೆಸ್‌ ಸೇರಿಕೊಂಡಿದೆ. ಮೇ ತಿಂಗಳಲ್ಲಿ ಸಂಗ್ರಹವಾದ ತೆರಿಗೆ ಆದಾಯವು ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ 44% ದಷ್ಟು ಏರಿಕೆಯಾಗಿದ್ದು 2021ರ ಮೇ ತಿಂಗಳಲ್ಲಿ 97,281 ಕೋಟಿ ರೂಪಾಯಿ ಸಂಗ್ರಹವಾಗಿತ್ತು.

ಸಂಗ್ರಹವಾಗಿರುವ ಸಮಗ್ರ ಸರಕು ಮತ್ತು ಸೇವಾ ತೆರಿಗೆ(IGST)ಯಲ್ಲಿ 27,924ಕೋಟಿ ರೂ. ಕೇಂದ್ರಕ್ಕೆ ಹಾಗೂ 23,123 ಕೋಟಿ ರೂ.ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು 86,912 ಕೋಟಿ ರೂ. ಜಿಎಸ್‌ಟಿ ಪರಿಹಾರವನ್ನು ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದೆ. ಸರಕುಗಳ ಆಮದು ಆದಾಯವು 43% ಹೆಚ್ಚಾಗಿದ್ದು ದೇಶೀಯ ವಹಿವಾಟಿನ ಆದಾಯವೂ ಕೂಡ 44% ಹೆಚ್ಚಾಗಿದೆ.

ಮಾರ್ಚ್‌ ತಿಂಗಳ ನಂತರ ಸತತವಾಗಿ ಮೂರನೇ ಬಾರಿ 1.40 ಲಕ್ಷ ಕೋಟಿರೂಪಾಯಿಗೂ ಹೆಚ್ಚಿನ ತೆರಿಗೆ ಸಂಗ್ರಹವಾಗಿದ್ದು ಒಟ್ಟೂ 7.3 ಕೋಟಿ ಇ-ವೇ ಬಿಲ್‌ಗಳು ದಾಖಲಾಗಿವೆ. ಕರ್ನಾಟಕದಲ್ಲೂ ಕೂಡ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದ್ದು ಒಟ್ಟೂ 9,232ಕೋಟಿ ರೂ. ಸಂಗ್ರಹವಾಗಿದ್ದು ಇದು ಕಳೆದ ವರ್ಷಕ್ಕೆ ಹೋಲಿಸಿದರೆ 60% ದಷ್ಟು ಏರಿಕೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!