October 9, 2026
Friday, October 9, 2026
spot_img

GT vs CSK ಹೈವೋಲ್ಟೇಜ್ ಫೈಟ್: ಟಾಸ್ ಒಲಿದ ಚೆನ್ನೈಗೆ ಮೊದಲು ಬೌಲಿಂಗ್ ಭಾಗ್ಯ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್‌ನ 66ನೇ ಮಹತ್ವದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್​ಕೆ ನಾಯಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಪ್ರಸಕ್ತ ಆವೃತ್ತಿಯ ಲೀಗ್ ಹಂತದಲ್ಲಿ ಉಭಯ ತಂಡಗಳಿಗೂ ಇದು 14ನೇ ಹಾಗೂ ಕೊನೆಯ ಪಂದ್ಯವಾಗಿದೆ. ಈ ಸೀಸನ್‌ನಲ್ಲಿ ಜಿಟಿ ಮತ್ತು ಸಿಎಸ್​ಕೆ ಎರಡನೇ ಬಾರಿಗೆ ಪರಸ್ಪರ ಸೆಣಸಾಡುತ್ತಿವೆ. ಈಗಾಗಲೇ 16 ಅಂಕಗಳನ್ನು ಪಡೆದುಕೊಂಡಿರುವ ಶುಬ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ಲೇಆಫ್ ಟಿಕೆಟ್ ಅನ್ನು ಅಧಿಕೃತವಾಗಿ ಖಚಿತಪಡಿಸಿಕೊಂಡಿದೆ.

ಮತ್ತೊಂದೆಡೆ, ಸತತ ಸೋಲುಗಳಿಂದ ಕಂಗಾಲಾಗಿರುವ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ಲೇಆಫ್ ಹಾದಿ ಬಹುತೇಕ ಕಠಿಣವಾಗಿದೆ. ಆದಾಗ್ಯೂ, ತಾಂತ್ರಿಕವಾಗಿ ರನ್‌ರೇಟ್ ಮತ್ತು ಇತರ ತಂಡಗಳ ಫಲಿತಾಂಶದ ಮೇಲೆ ಸಿಎಸ್​ಕೆಗೆ ಸಣ್ಣ ಅವಕಾಶ ಬಾಕಿ ಉಳಿದಿದ್ದು, ಈ ಪಂದ್ಯದಲ್ಲಿ ಬೃಹತ್ ಜಯ ಸಾಧಿಸಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಚೆನ್ನೈ ಪಡೆಗೆ ಇದು ‘ಮಾಡು ಇಲ್ಲವೇ ಮಡಿ’ ಹೋರಾಟವಾಗಿದೆ.

Must Read