ಗುಜರಾತೀ ಶೈಲಿಯ ಟೊಮ್ಯಾಟೋ ಕರ್ರಿ…

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದಿನಾ ಅದೇ ಅನ್ನ ಸಾರು ತಿಂದು ಬೋರಾಗಿದೆ ಅನ್ನೋರಿಗೆ ಈ ಕರ್ರಿ ತುಂಬಾನೇ ಸೂಪರ್!

ಬೇಕಾಗುವ ಸಾಮಾಗ್ರಿ:

ಶುದ್ಧ ತೆಂಗಿನೆಣ್ಣೆ
ಸಾಸಿವೆ ಕಾಳು ಸ್ವಲ್ಪ
ಜೀರಿಗೆ ಸ್ವಲ್ಪ
ಹಸಿಮೆಣಸಿನ ಕಾಯಿ ನಾಲ್ಕು, ಶುಂಠಿ ಬೆಳ್ಳುಳ್ಳಿ ಪೇಸ್ಟ್
ಸಣ್ಣಗೆ ಹಚ್ಚಿದ ಈರುಳ್ಳಿ ಒಂದು ಕಪ್
ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಒಂದು ಕಪ್
ಒಂದು ಕಪ್ ಸಕ್ಕರೆ, ಸ್ವಲ್ಪ ಉಪ್ಪು
ಅರಶಿನ ಪುಡಿ, ಮೆಣಸಿನ ಹುಡಿ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ

ಮಾಡುವ ವಿಧಾನ:

ಒಂದು ಪ್ಯಾನ್ ನಲ್ಲಿ ಸ್ವಲ್ಪ ತೆಂಗಿನೆಣ್ಣೆ/ನಿಮ್ಮ ಆಯ್ಕೆಯ ಎಣ್ಣೆ ಹಾಕಿ ಬಿಸಿಗಿಟ್ಟುಕೊಳ್ಳಿ. ಸಾಸಿವೆ, ಸ್ವಲ್ಪ ಜೀರಿಗೆ ಹಾಕಿ ಅದು ಸಿಡಿದ ತಕ್ಷಣ ಸೀಳಿದ  ಎರಡು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಿ. ಪರಿಮಳ ಬರುತ್ತಿದ್ದಂತೆಯೇ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಸಣ್ಣಗೆ ಹಚ್ಚಿಟ್ಟುಕೊಂಡ ಟೊಮ್ಯಾಟೋ ಹಾಕಿ ಗೊಟಾಯಿಸಿ. ಸರಿಯಾಗಿ ಬೆಂದಿದೆಯೋ ಪರೀಕ್ಷಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಒಂದು ಟೀ ಸ್ಪೂನ್ ಸಕ್ಕರೆ ಬೆರೆಸಿಕೊಳ್ಳಿ.

1/2 ಚಮಚ ಅರಿಶಿನದ ಪುಡಿ,1 ಚಮಚ ಅಚ್ಚ ಖಾರದ ಪುಡಿ , 1/2 ಚಮಚ ಕೊತ್ತಂಬರಿ ಪುಡಿ, 1/4 ಚಮಚ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ನಂತರ 1 ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ 10 ನಿಮಿಷ ಕುದಿಯಲು ಬಿಡಿ. ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಹಾಗೂ ನಿಂಬೆ ಹಣ್ಣಿನ ರಸ ಸೇರಿಸಿಕೊಳ್ಳಿ. ಬಿಸಿ ಬಿಸಿ ಗುಜರಾತೀ ಕರ್ರಿ ರೆಡಿ ಟೂ ಸರ್ವ್!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!