Monday, September 26, 2022

Latest Posts

ಆಸ್ತಿ ವಿವರ ಸಲ್ಲಿಸುವಂತೆ ನಟ ವಿಶಾಲ್ ಗೆ ಮದ್ರಾಸ್ ಹೈಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಲೈಕಾ ಕಂಪನಿ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ನಟ ವಿಶಾಲ್ ಮದ್ರಾಸ್ ಹೈಕೋರ್ಟ್​ಗೆ ಹಾಜರಾಗಿದ್ದು, ಕೋರ್ಟ್ ವಿಶಾಲ್ ಆಸ್ತಿ ವಿವರಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿದೆ.

ನಟ ವಿಶಾಲ್ ಅವರು ತಮ್ಮ ನಿರ್ಮಾಣ ಸಂಸ್ಥೆ ವಿಶಾಲ್ ಫಿಲ್ಮ್ ಫ್ಯಾಕ್ಟರಿ ನಿರ್ಮಾಣಕ್ಕಾಗಿ ಅನ್ಬುಚೆಜಿಯನ್ ಅವರ ಗೋಪುರಂ ಫಿಲ್ಮ್ಸ್ ನಿಂದ 21 ಕೋಟಿ 29 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ನಂತರ ಲೈಕಾ ಕಂಪನ ಈ ಸಾಲದ ಮೊತ್ತವನ್ನು ಪಾವತಿಸಿತ್ತು.

ಸಾಲದ ಪಾವತಿಗೆ ಸಂಬಂಧಿಸಿದಂತೆ ವಿಶಾಲ್ ಮತ್ತು ಲೈಕಾ ನಡುವಿನ ಒಪ್ಪಂದದಲ್ಲಿ, ಸಂಪೂರ್ಣ ಸಾಲದ ಮೊತ್ತವನ್ನು ಮರುಪಾವತಿ ಮಾಡುವವರೆಗೆ ವಿಶಾಲ್ ಫಿಲ್ಮ್ ಕಂಪನಿಯ ಎಲ್ಲ ಚಿತ್ರಗಳ ಹಕ್ಕುಗಳನ್ನು ಲೈಕಾಗೆ ನೀಡಲಾಗುವುದು ಎಂದು ಖಾತರಿಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಲೈಕಾ ಕಂಪನಿಯು ತಮಗೆ ಬರಬೇಕಿದ್ದ 21 ಕೋಟಿ 29 ಲಕ್ಷ ರೂಪಾಯಿಗಳನ್ನು ಪಾವತಿಸಿಲ್ಲ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿದೆ.

ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಕೋರ್ಟ್ , ಮೂರು ವಾರದೊಳಗೆ 15 ಕೋಟಿ ರೂಪಾಯಿಯನ್ನು ಹೈಕೋರ್ಟ್ ಮುಖ್ಯ ರಿಜಿಸ್ಟ್ರಾರ್ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ವಿಶಾಲ್ ಕಡೆಯವರಿಗೆ ಸೂಚಿಸಿತ್ತು.
ಇಂದು ಮತ್ತೆ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರ ಮುಂದೆ ಈ ಪ್ರಕರಣದ ವಿಚಾರಣೆ ನಡೆಯಿತು. ನ್ಯಾಯಾಲಯದ ಆದೇಶದಂತೆ ನಟ ವಿಶಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದು, ಪ್ರಕರಣದ ವಿಚಾರಣೆ ನಡೆಯಿತು.

ವಾದ ವಿವಾದ ಆಲಿಸಿ, ವಿಶಾಲ್ ಆಸ್ತಿ ವಿವರಗಳನ್ನೊಳಗೊಂಡ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಲಾಗಿದೆ. ಅಲ್ಲದೇ ಪ್ರತಿ ದಿನವೂ ವಿಶಾಲ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!