ಟೀ ಕುಡಿಯಲು ಎಕ್ಸ್‌ಪ್ರೆಸ್ ರೈಲು ನಿಲ್ಲಿಸಿದ ಲೋಕೋ ಪೈಲಟ್‌ಗಳು: ತನಿಖೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟೀ ಕುಡಿಯುವುದಕ್ಕಾಗಿ ಲೊಕೊ ಪೈಲಟ್‌ಗಳು ಚಲಿಸುತ್ತಿದ್ದ ಎಕ್ಸ್‌ಪ್ರೆಸ್‌ ರೈಲನ್ನ ನಿಲ್ಲಿಸಿರುವ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ. ಗ್ವಾಲಿಯರ್-ಬರೋನಿ ಎಕ್ಸ್‌ಪ್ರೆಸ್ (11123) ಲೊಕೊ ಪೈಲಟ್‌ಗಳು ಟೀ ಕುಡಿಯಲು ಬಿಹಾರದ ಶಿವನ್ ನಿಲ್ದಾಣದ ರೈಲ್ವೇ ಕ್ರಾಸಿಂಗ್ ಬಳಿ ರೈಲನ್ನು ನಿಲ್ಲಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸಂಜೆ 5.30ಕ್ಕೆ ಶಿವನ್ ನಿಲ್ದಾಣದಿಂದ ಹಾಜಿಪುರದತ್ತ ತಲುಪಿದ ಬಳಿಕ ಪ್ರಯಾಣಿಕರು ಈ ವಿಷಯವನ್ನು ನಿಲ್ದಾಣದ ನಿರ್ದೇಶಕರ ಗಮನಕ್ಕೆ ತಂದರು. ಪ್ರಯಾಣಿಕರ ಹೇಳಿದ ವಿಚಾರವನ್ನು ನಿರ್ದೇಶಕರು, ವಾರಣಾಸಿಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಗಮನಕ್ಕೆ ತಂದರು. ಕ್ರಾಸಿಂಗ್‌ನಲ್ಲಿ ಟೀ ಕುಡಿಯಲು ರೈಲು ನಿಂತಾಗ ರೈಲ್ವೇ ಕ್ರಾಸಿಂಗ್‌ನ ಎರಡೂ ಬದಿಯಲ್ಲಿ ವಾಹನಗಳು ನಿಂತಿದ್ದು, ತುರ್ತು ಆಂಬುಲೆನ್ಸ್ ಕೂಡ ವಾಹನಗಳಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈಶಾನ್ಯ ರೈಲ್ವೆಯ (ಎನ್‌ಇಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಂಕಜ್ ಸಿಂಗ್, ಘಟನೆಯ ಕುರಿತು ಪ್ರತಿಕ್ರಿಯಿಸಲು ಲೋಕೋ ಪೈಲಟ್‌ಗಳಿಗೆ ಸೂಚಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ರೈಲ್ವೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!