ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲಸವಿಲ್ಲದವ ಏನೋ ಮಾಡಿದ್ನಂತೆ ಹಾಗಾಗಿದೆ ಈ ವಿಡಿಯೋ ಕತೆ. ಬೆಕ್ಕಿಗೆ ಹೇರ್ ಸ್ಟೈಲ್, ಮೀಸೆ ಕತ್ತರಿಸುವುದು ಅಂದರೇನು? ನಿಜ ಕಣ್ರೀ ಇಲ್ಲೊಬ್ಬ ಕೇಷ ವಿನ್ಯಾಸಕ ಬೆಕ್ಕಿನ ಕೂದಲು ಕತ್ತರಿಸಿ ಅಂದವಾಗಿ ರೆಡಿ ಮಾಡಿದ್ದಾನೆ.
ಮುದ್ದಾದ ಬಿಳಿ ಬೆಕ್ಕಿನ ತಲೆ ಕೂದಲು ಹಾಗೂ ಮೀಸೆ ಕತ್ತರಿಸುವ ವೇಲೆ ಬೆಕ್ಕು ಕೂಡ ಅಲುಗಾಡದೆ ಬಹಳ ಆನಂದದಿಂದ ಇರುವಂತೆ ಕಾಣುತ್ತದೆ. ಬಾಚಣಿಗೆಯಿಂದ ಅದರ ಕೂದಲನ್ನು ಮೇಲಕ್ಕೆತ್ತಿ ಕತ್ತರಿಸುವ ಬೆಕ್ಕಿನ ರಿಯಾಕ್ಷನ್ ನೋಡಬೇಕು ಸಖತ್ ಮುದ್ದಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ..
just a little off the top pic.twitter.com/LqcCdZQ6Vt
— chaotic cat pictures & videos (@chaoticcatpics) November 16, 2022