ಎಂಜಲಿನಲ್ಲಿ ಮಹಿಳೆ ತಲೆಬಾಚಿದ ಕೇಶವಿನ್ಯಾಸಕಾರ ಹಬೀಬ್, ಆಕ್ರೋಶಕ್ಕೆ ಹೆದರಿ ಕ್ಷಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ಯಗಾರವೊಂದರಲ್ಲಿ ಮಹಿಳೆಯ ತಲೆ ಮೇಲೆ ಉಗುಳಿದ್ದಕ್ಕಾಗಿ ಕೇಶ ವಿನ್ಯಾಸಕ ಜಾವೇದ್ ಹಬೀಬ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೇಶವಿನ್ಯಾಸಕರು ಉತ್ತರಪ್ರದೇಶದ ಮುಜಾಫ್ಫರನಗರದಲ್ಲಿ ನಡೆಸಿದ ಕಾರ್ಯಗಾರದಲ್ಲಿ ಹಬೀಬ್ ಈ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಮಹಿಳೆ ಹಬೀಬ್ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.
ಇಷೆಲ್ಲಾ ನಡೆದ ಮೇಲೆ ಪೊಲೀಸರ ಕ್ರಮಕ್ಕೆ ಹೆದರಿ ಹಬೀಬ್ ಈ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ. ನಾನು ಕಾರ್ಯಗಾರದಲ್ಲಿ ಹಾಸ್ಯ ತುಂಬಲು ಈ ರೀತಿ ಮಾಡಿದೆ ಎಂದು ಸಮರ್ಥನೆಯ ಹೇಳಿಕೆ ನೀಡಿದ್ದಾರೆ.
ಹಬೀಬ್ ನ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲ ಹಬೀಬ್, ನೀರಿನ ಕೊರತೆ ಇದ್ದರೆ, ಎಂಜಲು ಬಳಸಿ ಎಂದು ಹೇಳುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!