ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಾರಾಷ್ಟ್ರೀಯ ಟಿ-20 ಯಲ್ಲಿ ಐಸಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ. ಅದೇನೆಂದರೆ, ಇನ್ಮುಂದೆ ನಿಧಾನಗತಿಯ ಬೌಲಿಂಗ್ ಮಾಡಿದರೆ ಪಂದ್ಯದ ಉಳಿದ ಓವರ್‌ಗಳಲ್ಲಿ 30 ಯಾರ್ಡ್ ಹೊರಗಡೆ ಕಡಿಮೆ ಫೀಲ್ಡರ್‌ಗಳನ್ನು ನಿಲ್ಲಿಸಿಕೊಳ್ಳಬೇಕು ಎಂದಾಗಿದೆ.
ಜನವರಿ 16ರಿಂದ ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಹಾಗೂ ಐರ್ಲ್ಯಾಂಡ್ ನಡುವಿನ ಪಂದ್ಯದಲ್ಲೇ ಈ ಹೊಸ ನಿಯಮ ಅನ್ವಯವಾಗಲಿದ್ದು, ಈ ಮೂಲಕ ಇನ್ನು ಮುಂದೆ ಎಲ್ಲಾ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಈ ನಿಯಮ ಜಾರಿಯಾಗಲಿದೆ.
ಇದರ ಜೊತೆಗೆ ದ್ವಿಪಕ್ಷೀಯ T20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನಿಂಗ್ಸ್‌ನ ಮಧ್ಯದಲ್ಲಿ ಐಚ್ಛಿಕ ಡ್ರಿಂಕ್ಸ್ ಬ್ರೇಕ್ ಪರಿಚಯಿಸಿದೆ.ಆಟಗಾರರು ಮತ್ತು ಆಟಗಾರರ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರಲ್ಲಿ ತಿಳಿಸಿರುವ ನಿಧಾನಗತಿಯ ದರದ ನಿರ್ಬಂಧಗಳಲ್ಲಿ ಬದಲಾವಣೆ ತಂದಿದೆ.
ನಿಯಮ ಪ್ರಕಾರ ಇನ್ನು , ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಇನ್ನಿಂಗ್ಸ್‌ನ ಅಂತಿಮ ಓವರ್‌ನ ಮೊದಲ ಚೆಂಡನ್ನು ಇನ್ನಿಂಗ್ಸ್‌ನ ಅಂತ್ಯಕ್ಕೆ ನಿಗದಿತ ಅಥವಾ ಮರುನಿಗದಿಪಡಿಸಿದ ಸಮಯದೊಳಗೆ ಬೌಲ್ ಮಾಡುವ ಸ್ಥಿತಿಯಲ್ಲಿರಬೇಕು. ಒಂದು ವೇಳೆ ಇಂತಹ ಸ್ಥಿತಿಯಲ್ಲಿಲ್ಲದಿದ್ದರೆ ಇನ್ನಿಂಗ್ಸ್‌ನ ಉಳಿದ ಓವರ್‌ಗಳಿಗೆ 30-ಯಾರ್ಡ್ ವೃತ್ತದ ಹೊರಗೆ ಕಡಿಮೆ ಫೀಲ್ಡರ್‌ಗಳನ್ನು ನಿಲ್ಲಿಸಿಕೊಳ್ಳಬೇಕು.
ಇನ್ನು ಪ್ರತಿ ಸರಣಿಯ ಪ್ರಾರಂಭದಲ್ಲಿ ಆಟಗಾರರ ನಡುವಿನ ಒಪ್ಪಂದಕ್ಕೆ ಪ್ರತಿ ಇನ್ನಿಂಗ್ಸ್‌ನಲ್ಲಿ ಎರಡೂವರೆ ನಿಮಿಷಗಳ ಐಚ್ಛಿಕ ಪಾನೀಯಗಳ ವಿರಾಮವನ್ನು ತೆಗೆದುಕೊಳ್ಳಬಹುದು.