12 ಒತ್ತೆಯಾಳುಗಳನ್ನು ರಿಲೀಸ್ ಮಾಡಿದ ಹಮಾಸ್, ಬದಲಿಗೆ ಕೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸದ್ಯ ಕದನ ವಿರಾಮವಿದ್ದು, ಹಮಾಸ್ 12 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಕದನ ವಿರಾಮದ ಭಾಗವಾಗಿ ಈ ಹಿಂದೆಯೇ ಮಾತನಾಡಿದಂತೆ 12 ಇಸ್ರೇಲಿಗರ ಬಿಡುಗಡೆಯಾಗಿದೆ, ಇದಕ್ಕೆ ಪ್ರತಿಯಾಗಿ ಇಸ್ರೇಲ್ 30 ಪ್ಯಾಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಿದೆ.

ಇಸ್ರೇಲ್ ಮೇಲೆ ಹಿಡಿತ ಸಾಧಿಸಿದ್ದ ಹಮಾಸ್ ಒಟ್ಟಾರೆ 240  ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿತ್ತು. ಕತಾರ್ ಮಧ್ಯಸ್ಥಿಕೆಯಲ್ಲಿ ನಾಲ್ಕು ದಿನಗಳ ಕದನವಿರಾಮ ಘೋಷಿಸಲಾಗಿತ್ತು, ಮತ್ತೆ ಅದನ್ನು ಇನ್ನೆರಡು ದಿನ ವಿಸ್ತರಿಸಲಾಗಿತ್ತು.

ಇಸ್ರೇಲ್-ಹಮಾಸ್ ಯುದ್ಧದಲ್ಲಿ ಈಗಾಗಲೇ 16,200 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ಮನೆ ಕಳೆದುಕೊಂಡಿದ್ದಾರೆ.

ಅಕ್ಟೋಬರ್ 7ರಂದು ನಡೆದ ಸಂಗೀತೋತ್ಸವಕ್ಕೆ ಬೇರೆ ದೇಶಗಳಿಂದಲೂ ಜನ ಆಗಮಿಸಿದ್ದರು. ಇದರ ಮೇಲೆ ಹಮಾಸ್ ದಾಳಿ ನಡೆಸಿ ಸಾಕಷ್ಟು ಮಂದಿಯನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!