Monday, October 2, 2023

Latest Posts

ಹನುಮಾನ್ ಆದಿವಾಸಿ: ಕಾಂಗ್ರೆಸ್ ನಾಯಕನ ಹೊಸ ವಾದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ರೀರಾಮನನ್ನು ಶ್ರೀಲಂಕಾಗೆ ತೆರಳಲು ದಾರಿ ತೋರಿಸಿದ್ದು ಆದಿವಾಸಿ ಹನುಮಾನ್ ಎಂದು ಮಧ್ಯಪ್ರದೇಶ ಕಾಂಗ್ರೆಸ್ ನಾಯಕ ಉಮಂಗ್ ಸಿಂಘಾರ್ ಹೇಳಿದ್ದಾರೆ.

ಬಡುಕಟ್ಟ ಸಮುದಾಯದ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ 123ನೇ ಪುಣ್ಯತಿಥಿ ಸಮಾರಂಭದ ಭಾಷಣದಲ್ಲಿ , ನಮ್ಮ ನಾಯಕ ಬಿರ್ಸಾ ಮುಂಡಾ, ಹನುಮಾನ್ ನಮಗೆ ಪ್ರೇರಣೆಯಾಗಿದ್ದಾರೆ. ನಾವು ಹೆಮ್ಮೆಯಿಂದ ಆದಿವಾಸಿ ಎಂದು ಹೇಳಿಕೊಳ್ಳಬೇಕು ಎಂದು ಉಮಂಗ್ ಸಿಂಘಾರ್ ಹೇಳಿದ್ದಾರೆ.

ಕೆಲವರು ರಾಮಾಯಣದಲ್ಲಿ ಬರೆದಿದ್ದಾರೆ. ಶ್ರೀರಾಮ ಲಂಕೆಗೆ ತೆರಳಲು ವಾನರ ಸೇನೆ ನೆರವು ನೀಡಿತು. ಈ ವಾನರ ಸೇನೆ ಎಂದರೆ ವನದಲ್ಲಿರುವ ಸೇನೆ. ಅಂದರೆ ಆದಿವಾಸಿ ಸಮುದಾಯ. ಶ್ರೀರಾಮನು ಲಂಕೆಗೆ ತೆರಳಲು ದಾರಿ ತೋರಿಸಿದ್ದು, ಲಂಕೆಯಲ್ಲಿ ಸೀತಾಮಾತೆಯನ್ನು ಸುರಕ್ಷಿತವಾಗಿ ಕರೆ ತರಲು ನೆರವು ನೀಡಿದ್ದು ಆದಿವಾಸಿ ನಾಯಕ ಹನುಮಾನ್ ಎಂದು ಉಮಂಗ್ ಸಿಂಘಾರ್ ಹೇಳಿದ್ದಾರೆ.

ಆದರೆ ಕಾಂಗ್ರೆಸ್ ನಾಯಕ ಈ ಹೇಳಿಕೆಯನ್ನು ಬಿಜೆಪಿ ವಿರೋಧಿಸಿದೆ. ಹನುಮಾನ್ ಹಿಂದುಗಳಿಗೆ ದೇವರು. ಹಿಂದುಗಳ ಕೋಟ್ಯಾಂತರ ನಂಬಿಕೆ, ಭಕ್ತಿ ಹಾಗೂ ಶಕ್ತಿಯಾಗಿರುವ ಹನುಮಾನ್ ನಿಮಗೆ ಒಬ್ಬ ಸಮುದಾಯದ ನಾಯಕನಾಗಿ ಕಂಡಿರುವುದು ಶೋಚನೀಯ. ಎಲ್ಲಾ ಹಿಂದುಗಳಿಗೆ ಹನುಮಾನ್ ದೇವರು. ನಿಮ್ಮ ಭಾಷಣದ ಸರಕಿಗೆ, ಚಪ್ಪಾಳೆಗೆ, ಸಮುದಾಯವನ್ನು ಒಲೈಸಲು ಈ ರೀತಿಯ ಹೇಳಿಕೆ ನೀಡಿ ಹಿಂದುಗಳ ಭಾವನೆಗೆ ದಕ್ಕೆ ತಂದಿದ್ದೀರಿ ಎಂದು ಮಧ್ಯಪ್ರದೇಶ ಬಿಜೆಪಿ ವಕ್ತಾರ ಹಿತೇಶ್ ಬಾಜ್‌ಪೈ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!