ಏಕೆ ಝೀರೋ ಟ್ರಾಫಿಕ್ ಮಾಡಿದ್ದೀರಿ?: ಸಿಎಂ ಸಿದ್ದರಾಮಯ್ಯ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈಸೂರಿನ ವರುಣಾ ಕ್ಷೇತ್ರದಲ್ಲಿ ಕೃತಜ್ಞತಾ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ವ ಕ್ಷೇತ್ರಕ್ಕೆ ತೆರಳಿದ್ದರು. ಈ ವೇಳೆ ಮೈಸೂರು ಏರ್ಪೋರ್ಟ್ ನಿಂದ ಜಿಲ್ಲಾ ಪಂಚಾಯ್ತಿ ಕಚೇರಿಗೆ ಆಗಮಿಸಿದ ಸಮಯ ಝೀರೋ ಟ್ರಾಫಿಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ಇದನ್ನು ಗಮನಿಸಿದ ಸಿಎಂ ಮೈಸೂರು ಜಿಲ್ಲಾ ಪೊಲೀಸ್ ಆಯುಕ್ತರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಬಾರದು ಎಂಬುದಾಗಿ ನಿಮಗೆ ಗೊತ್ತಿದೆಯೋ ಇಲ್ಲವೋ ಎಂಬುದಾಗಿ ಪುಲ್ ಕ್ಲಾಸ್ ತಗೊಂಡು, ಗರಂ ಆದಂತ ಘಟನೆ ನಡೆಯಿತು.

ಮೈಸೂರು ಏರ್ಪೋರ್ಟ್ ನಿಂದ ಜಿಲ್ಲಾ ಪಂಚಾಯ್ತಿ ಆವರಣಕ್ಕೆ ಬಂದಂತ ಸಿಎಂ, ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ, ಮೈಸೂರು ಪೊಲೀಸ್ ಆಯುಕ್ತರನ್ನು ಕರೆದು, ಏಕೆ ಝೀರೋ ಟ್ರಾಫಿಕ್ ಮಾಡಿದ್ದೀರಿ.? ನಿಮಗೆ ಗೊತ್ತಿದೆಯೋ ಇಲ್ಲವೋ ಝೀರೋ ಟ್ರಾಫಿಕ್ ಬೇಡ ಅಂತ ಹೇಳಿದ್ದು ಎಂಬುದಾಗಿ ಕ್ಲಾಸ್ ತೆಗೆದುಕೊಂಡರು.

ಇನ್ನೂ ಮುಂದುವರೆದು ಪೊಲೀಸ್ ಆಯುಕ್ತರ ಮೇಲೆ ಸಿಟ್ಟಾದ ಸಿಎಂ ಸಿದ್ಧರಾಮಯ್ಯ, ಡೋಂಟ್ ಡೂ ದಟ್ ಎಂಬುದಾಗಿ ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಡಿಸಿಪಿ ಮುತ್ತರಾಜ್ ಮೇಲೆ ಗರಂ ಆಗಿ ಹೇಳುವ ಮೂಲಕ, ಮೈಸೂರು ಜಿಲ್ಲಾ ಪಂಚಾಯ್ತಿ ಆವರಣದೊಳೆಗೆ ತೆರಳಿದಂತ ಘಟನೆ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!