33ನೇ ವಸಂತಕ್ಕೆ ಕಾಲಿಟ್ಟ ಆಸಿಸ್‌ ಆಟಗಾರ ಮಾರ್ಕಸ್‌ ಸ್ಟೋಯಿನಸ್:‌ ಶುಭಕೋರಿದ ಗೆಳತಿ ಸಾರಾ ಝಾರ್ನುಚ್

ಹೊಸದಿಗಂತ ಡಿಜಿಟಲ್ ಡೆಸ್ಕ್
ಐಪಿಎಲ್‌ ನಲ್ಲಿ ಲಖನೌ ಸೂಪರ್​ ಜೈಂಟ್ಸ್​ ಫ್ರಾಂಚೈಸಿ ಪರ ಕಣಕ್ಕಿಳಿಯುವ ಆಸ್ಟ್ರೇಲಿಯಾದ ಆಲ್​ರೌಂಡರ್​ ಮಾರ್ಕಸ್​ ಸ್ಟೋಯ್ನಿಸ್​ ಇಂದು (ಆಗಸ್ಟ್ 16) ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಸ್ಟೊಯಿನಿಸ್ ಜೊತೆಗೆ ಡೇಟಿಂಗ್‌ ನಡೆಸುತ್ತಿರುವ ಆಸ್ಟ್ರೇಲಿಯಾದ ಪ್ರಖ್ಯಾತ ಮಾಡೆಲ್ ಸಾರಾ ಝಾರ್ನುಚ್ ಪ್ರಿಯತಮನಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.‌

ಐಪಿಎಲ್ 2022 ರ ಸಮಯದಲ್ಲಿ ಮಾರ್ಕಸ್ ಸ್ಟೊಯಿನಿಸ್ ಅವರೊಂದಿಗೆ ಸಾರಾ ಝಾರ್ನುಚ್ ಭಾರತಕ್ಕೆ ಬಂದಿದ್ದರು. ಲಕ್ನೋ ಸೂಪರ್ ಜೈಂಟ್ಸ್‌ ಪರ 104 ಮೀ. ದೊಡ್ಡ ಸಿಕ್ಸರ್ ಬಾರಿಸಿದ್ದ ಸ್ಟೊಯಿನಿಸ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಗೆಳತಿ ಸಾರಾ ಅವರನ್ನು ತೋರಿಸಿದ್ದರು.

ಅಲ್ಲಿಂದೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪ್ರೇಮಿಗಳು ಸುದ್ದಿಯಾಗುತ್ತಿದ್ದಾರೆ. ಸಾರಾ ಝಾರ್ನುಚ್ ಅವರು 2013 ರಲ್ಲಿ ಮಿಸ್ ಟೂರಿಸಂ ಆಸ್ಟ್ರೇಲಿಯಾ ಸ್ಪರ್ಧೆ ಗೆದ್ದಿರುವ ಮಾಡೆಲ್. ಜೊತೆಗೆ ʼಗೀಲಾಂಗ್ ಕಪ್ʼ ನ ಮಾಜಿ ರಾಯಭಾರಿಯೂ ಹೌದು. ಸಾರಾ ವೃತ್ತಿಯಲ್ಲಿ ರೂಪದರ್ಶಿ, ವಿನ್ಯಾಸಕಿ ಮತ್ತು ಸೌಂದರ್ಯ ಅಂಕಣಗಾರ್ತಿಯಾಗಿ ಹೆಸರು ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಆಕೆಗೆ 1.25 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ.

ಮಾರ್ಕಸ್‌ ಸ್ಟೋಯ್ನಸ್‌ ಪ್ರಸ್ತುತ ವಿಶ್ವದ ಶ್ರೇಷ್ಠ ಆಲ್ರೌಂಡರ್‌ ಗಳಲ್ಲಿ ಒಬ್ಬರು ಎಂದು ಹೆಸರು ಗಳಿಸಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾ ಟಿ.20 ವಿಶ್ವಕಪ್‌ ಗೆಲ್ಲುವಲ್ಲಿ ಮಾರ್ಕಸ್‌ ಪಾತ್ರ ಪ್ರಮುಖವಾಗಿತ್ತು. ಸದ್ಯ ಇಂಗ್ಲೆಂಡ್ ನಲ್ಲಿ ಸಾಗುತ್ತಿರುವ ʼದಿ ಹಂಡ್ರೆಡ್‌ʼ ಟೂರ್ನಿಯಲ್ಲಿ ಭಾಗಿಯಾಗಿರುವ ಸ್ಟೋಯ್ನಿಸ್ ಈ ವರ್ಷದ ಅಕ್ಟೋಬರ್‌ ನಲ್ಲಿ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಗೆ ಸಿದ್ಧತೆಯನ್ನು ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!