ಬಾಲಿವುಡ್‌ ಖ್ಯಾತ ಗಾಯಕನ ವಿರುದ್ಧ ಅತ್ಯಾಚಾರ ಕೇಸ್‌: ಆಕೆ ಯಾರೆಂದು ಗೊತ್ತಿಲ್ಲ ಎಂದ ರಾಕೇಶ್‌ ಜೈನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ರಾಹುಲ್ ಜೈನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ವಿಚಾರದಲ್ಲಿ 30 ವರ್ಷದ ಕಾಸ್ಟ್ಯೂಮ್ ಸ್ಟೈಲಿಸ್ಟ್ ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದು, ಮಹಿಳೆಯ ಆರೋಪದ ಮೇಲೆ ಪೊಲೀಸರು ರಾಹುಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಈ ಎಫ್‌ಐಆರ್‌ನಲ್ಲಿ, ”ರಾಹುಲ್ ನನ್ನ ಕೆಲಸವನ್ನು ಶ್ಲಾಘಿಸಿ Instagram ನಲ್ಲಿ ನನಗೆ ಸಂದೇಶ ಕಳುಹಿಸಿದ್ದಾರೆ ಮತ್ತು ನನ್ನನ್ನು ಅವರ ವೈಯಕ್ತಿಕ ಸ್ಟೈಲಿಸ್ಟ್ ಆಗಿ ನೇಮಿಸಿಕೊಳ್ಳುವುದಾಗಿ ಹೇಳಿ ಒಮ್ಮೆ ನನ್ನನ್ನು ಭೇಟಿಯಾಗಲು ಹೇಳಿದ್ರು. ನಾನು ಅವರನ್ನು ಭೇಟಿಯಾಗಲು ಅವರ ಫ್ಲಾಟ್‌ಗೆ ಹೋದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ವಿರೋಧಿಸಿದರೂ ಬಲವಂತವಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ನನ್ನ ಫೋನ್ ತೆಗೆದುಕೊಂಡು ತನ್ನ Instagram ಸಂದೇಶ ಮತ್ತು ಫೋನ್ ಕರೆಗೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಿದ್ದಾನೆಂದು” ದೂರು ನೀಡಿದ್ದಾರೆ.

ಪೊಲೀಸರು ರಾಹುಲ್ ಜೈನ್ ವಿರುದ್ಧ ಸೆಕ್ಷನ್ 376 ಮತ್ತು 323 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಇದು ಮಾಧ್ಯಮಗಳ ಮೂಲಕ ಹೊರಬೀಳುತ್ತಿದ್ದಂತೆ ಗಾಯಕ ರಾಹುಲ್ ಇದನ್ನು ಅಲ್ಲಗಳೆದಿದ್ದು, ಆಕೆ ನಿಜವಾಗಿಯೂ ಯಾರೆಂದು ನನಗೂ ಗೊತ್ತಿಲ್ಲ, ನಾನು ಆಕೆಯನ್ನು ಹಿಂದೆಂದೂ ನೋಡಿಲ್ಲ ಎಂದಿದ್ದಾರೆ. ಈ ಘಟನೆಯಿಂದ ನೆಟ್ಟಿಗರು ರಾಹುಲ್ ವಿರುದ್ಧ ಟೀಕೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!