ಹರ್ ಘರ್ ತಿರಂಗಾ ಅಭಿಯಾನ : ಬಿಜೆಪಿಯಿಂದ ಆಟೋ ಚಾಲಕರಿಗೆ ಧ್ವಜ ವಿತರಣೆ

ಹೊಸದಿಗಂತ ವರದಿ ಮಂಡ್ಯ:

ಬಿಜೆಪಿ ಜಿಲ್ಲಾ ಘಟದ ವತಿಯಿಂದ ಮಂಡ್ಯ ನಗರದ ಆಟೋ ಚಾಲಕರಿಗೆ ಹಾಗೂ ಟ್ಯಾಕ್ಸಿ ಚಾಲಕರಿಗೆ ತ್ರಿವರ್ಣ ಧ್ವಜ ವಿತರಣೆ ಮಾಡಲಾಯಿತು. ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಪ್ರತಿಯೊಬ್ಬರೂ ತಿರಂಗ ಧ್ವಜ ಹಾರಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತ್ರಿವರ್ಣ ಧ್ವಜವನ್ನು ವಿತರಿಸಲಾಯಿತು ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ. ಮಂಜುನಾಥ್ ತಿಳಿಸಿದರು.

1947ರ ಜುಲೈ 22ರಂದೇ ದೇಶವು ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಅಳವಡಿಸಿಕೊಂಡಿತು. ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಸ್ವತಂತ್ರ ಭಾರತದ ರಾಷ್ಟ್ರಧ್ವಜದ ಕನಸು ಕಾಣುತ್ತಿದ್ದ ಹೋರಾಟಗಾರರೆಲ್ಲರ ಧೈರ್ಯ ಮತ್ತು ಶೌರ್ಯವನ್ನು ಸ್ಮರಿಸುವ ದಿನವಿದು. ಅವರ ಕನಸನ್ನು ಸಾಕಾರಗೊಳಿಸುವ ಮತ್ತು ಅವರ ಕನಸಿನ ಭಾರತ ನಿರ್ಮಿಸುವ ಕರ್ತವ್ಯ ನಮ್ಮೆಲ್ಲರದಾಗಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಹೊತ್ತಲ್ಲಿ ನಾವು ಹರ್ ಘರ್ ತಿರಂಗಾ ಅಭಿಯಾನವನ್ನೂ ಬಲಿಷ್ಠಗೊಳಿಸುವುದರೊಂದಿಗೆ ಭಾರತೀಯರೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಮಂತ್ರದ ಸಂದೇಶವನ್ನು ಇಡೀ ವಿಶ್ವಕ್ಕೆ ತಿಳಿಯಪಡಿಸೋಣ ಎಂದು ಕರೆ ನೀಡಿದರು.ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ಆ. 13ರಿಂದ 15ರವರೆವಿಗೂ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!