ಡ್ಯಾಂಡ್ರಫ್‌ಗೆ ಹೇಳಿ ಗುಡ್‌ ಬಾಯ್‌..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಲೆಹೊಟ್ಟು, ಕೂದಲು ಉದುರುವುದು ಮತ್ತು ಬಿಳಿ ಕೂದಲು ಇತ್ತೀಚೆಗೆ ಸಾಮಾನ್ಯ ಸಮಸ್ಯೆಗಳಾಗಿವೆ.  ಡ್ಯಾಂಡ್ರಫ್ ಸದಾ ಕಿರಿಕಿರಿಯ ಜೊತೆಗೆ ತಲೆನೋವು ಉಂಟುಮಾಡುತ್ತದೆ. ಜೀವನಶೈಲಿ ಬದಲಾವಣೆ, ಅಧಿಕ ಒತ್ತಡ, ವಾಯು ಮಾಲಿನ್ಯ ಸೇರಿದಂತೆ ಹಲವಾರು ಅಂಶಗಳು ತಲೆಹೊಟ್ಟಿಗೆ ಕಾರಣವಾಗುತ್ತದೆ.

ತಲೆಹೊಟ್ಟು ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದ ನೆತ್ತಿಯ ವಿಷಯದಲ್ಲಿ ಕಾಳಜಿಯನ್ನು ತೆಗೆದುಕೊಳ್ಳಬೇಕು. ಮೂಲಿಕೆ ಎಣ್ಣೆಯನ್ನು ನೆತ್ತಿಗೆ ಹಚ್ಚುವುದರ ಜೊತೆಗೆ ನಿತ್ಯ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಬಾಚಣಿಗೆಯಿಂದ ಕೂದಲನ್ನು ಬಿಗಿಯಾಗಿ ಬಾಚಿಕೊಳ್ಳಬೇಡಿ. ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಡ್ರೈ ಶಾಂಪೂಗಳ ಮೊರೆ ಹೋಗದಿರುವುದು ಉತ್ತಮ. ಆಂಟಿ ಡ್ಯಾಂಡ್ರಫ್ ಶ್ಯಾಂಪೂಗಳನ್ನು ಬಳಸಬೇಕು. ಕೂದಲಿನ ಆರೋಗ್ಯವನ್ನು ಉತ್ತೇಜಿಸುವ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸಿ.

ತಲೆಹೊಟ್ಟು ಹೋಗಲಾಡಿಸಲು ಮೆಂತ್ಯೆ ಸಹಾಯ ಮಾಡುತ್ತದೆ. ಎರಡು ಚಮಚ ಮೆಂತ್ಯೆ ಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಅವುಗಳನ್ನು ಬೆಳಿಗ್ಗೆ ರುಬ್ಬಿ ಮತ್ತು 2 tbsp ಆಪಲ್ ಸೈಡರ್ ವಿನೆಗರ್ ಸೇರಿಸಿ. ಈ ಮಿಶ್ರಣವನ್ನು ನೆತ್ತಿಯ ಮೇಲೆ ಅನ್ವಯಿಸಿ 20 ನಿಮಿಷಗಳ ಬಳಿಕ ಸ್ನಾನ ಮಾಡಿ. ವಾರಕ್ಕೊಮ್ಮೆ ಬಿಸಿ ನೀರಿನಿಂದ ಬಾಚಣಿಗೆಗಳನ್ನು ಸ್ವಚ್ಛಗೊಳಿಸಿ. ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿದಾಗ ಅದನ್ನು ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಬೇಕು. ಸ್ನಾನಕ್ಕೆ ಶಾಂಪೂ ಮತ್ತು ಸೋಪುಗಳನ್ನು ಬಳಸುವ ಬದಲು ಪುಡಿಮಾಡಿದ ಸೀಗೇಕಾಯಿ ಪುಡಿಯನ್ನು ಬಳಸುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!