ಕೆನಡಾದಲ್ಲಿ ಹರ್ದಿಪ್ ಸಿಂಗ್ ನಿಜ್ಜರ್ ಆಪ್ತ, ಖಲಿಸ್ತಾನ ಉಗ್ರ ಅರ್ಶದೀಪ್ ದಲ್ಲಾ ಪೊಲೀಸ್ ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೆನಡಾದಲ್ಲಿ Khalistan ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ ಅರ್ಶ್ ಡಲ್ಲಾ ಅಲಿಯಾಸ್ ಅರ್ಶ್ ದೀಪ್ ಸಿಂಗ್ ನನ್ನು ಕೆನಡಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ಟೋಬರ್ 27 ಹಾಗೂ 28 ರಂದು ಕೆನಾಡದಲ್ಲಿ ಮಿಲ್ಟನ್‌ನಲ್ಲಿ ನಡೆದ ಶೂಟೌಟ್ ಪ್ರಕರಣ ಸಂಬಂಧ ಕೆನಡಾ ಪೊಲೀಸರು ಅರ್ಶದೀಪ್ ದಲ್ಲಾನ ವಶಕ್ಕೆ ಪಡೆದಿದ್ದಾರೆ. ಈ ಶೂಟೌಟ್ ವೇಳೆ ಅರ್ಶದೀಪ್ ದಲ್ಲಾ ಸ್ಥಳದಲ್ಲಿದ್ದ ಅನ್ನೋ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸದ್ಯ ಕೆನಡಾ ಪೊಲೀಸರು ಅರ್ಶದೀಪ್ ದಲ್ಲಾನ ವಶದಲ್ಲೇ ಇಟ್ಟುಕೊಂಡಿದ್ದಾರಾ ಅಥವಾ ರಿಲೀಸ್ ಮಾಡಿದ್ದಾರ ಅನ್ನೋ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಘಟನೆ ಕೆನಡಾ ಸರ್ಕಾರವನ್ನು ಬಟಾ ಬಯಲು ಮಾಡಿದೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೂ ಮುನ್ನ ಕೆನಡಾ ಸರ್ಕಾರಕ್ಕೆ ಭಾರತ ಸರ್ಕಾರ ಒಂದಷ್ಟು ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ನೀಡಿತ್ತು. ಈ ಪಟ್ಟಿಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್, ಅರ್ಶದೀಪ್ ದಲ್ಲಾ ಸೇರಿದಂತೆ ಹಲವರು ಹೆಸರನ್ನು ಭಾರತ ಸರ್ಕಾರ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಇವರ ಮೇಲಿರುವ ಪ್ರಕರಣಗಳನ್ನು ಉಲ್ಲೇಖಿಸಲಾಗಿತ್ತು. ಇಷ್ಟೇ ಅಲ್ಲ ಈ ಮೋಸ್ಟ್ ವಾಂಟೆಡ್ ಆರೋಪಿಗಳನ್ನು ಅರೆಸ್ಟ್ ಮಾಡಿ ಭಾರತಕ್ಕೆ ಗಡೀಪಾರು ಮಾಡಿ ಅಥವಾ ಕೆನಾದಲ್ಲಿ ಸೂಕ್ತ ಶಿಕ್ಷ ನೀಡುವಂತೆ ಭಾರತ ಆಗ್ರಹಿಸಿತ್ತು.

ಆದರೆ ಕೆನಡಾ ಈ ಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಕಾರಣ ಖಲಿಸ್ತಾನಿ ಉಗ್ರರ ಪಟ್ಟಿ ಕೆನಡಾದ ಮತ ಬ್ಯಾಂಕ್ ಆಗಿತ್ತು. ಇದಾದ ವರ್ಷಗಳ ಬಳಿಕ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೋಲಾಹಲ ಸೃಷ್ಟಿಸಿತ್ತು. ಈ ಘಟನೆ ಉಭಯ ರಾಷ್ಟ್ರಗಳ ಮೇಲೆ ಬೀರಿದ ಪರಿಣಾಮ ಬಿಡಿಸಿ ಹೇಳಬೇಕಿಲ್ಲ.ಇದೀಗ ಭಾರತ ನೀಡಿದ ಇದೇ ಪಟ್ಟಿಯಲ್ಲಿರುವ ಮತ್ತೊಬ್ಬ ಮೋಸ್ಟ್ ವಾಂಟೆಡ್ ಈ ಅರ್ಶದೀಪ್ ದಲ್ಲಾ. ಇದೀಗ ಈತ ಶೂಟೌಟ್ ಪ್ರಕರಣ ಸಂಬಂಧ ಕೆನಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತನ ವಶಕ್ಕೆ ಪಡೆಯುವ ಮೂಲಕ ಭಾರತದ ಹಲವು ಮೋಸ್ಟ್ ವಾಂಟೆಡ್ ಉಗ್ರರಿಗೆ ಕೆನಡಾ ಆಶ್ರಯ ನೀಡುತ್ತಿದೆ ಅನ್ನೋದು ದಟ್ಟವಾಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!